ಅರುಣ್‍ಜೇಟ್ಲಿ, ಸುಷ್ಮಾಸ್ವರಾಜ್ ಸೇರಿ ಅಗಲಿದ ಗಣ್ಯರಿಗೆ ಪರಿಷತ್‍ನಲ್ಲಿ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10- ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು.  ಕೇಂದ್ರದ ಮಾಜಿ ಸಚಿವರಾದ ಅರುಣ್‍ಜೇಟ್ಲಿ, ಸುಷ್ಮಾ ಸ್ವರಾಜ್, ರಾಮ್‍ಜೇಟ್ ಮಲಾನಿ ಸೇರಿದಂತೆ ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಲಾಯಿತು.

ಇಂದು ಬೆಳಗ್ಗೆ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಸಂತಾಪ ನಿರ್ಣಯ ಮಂಡಿಸಿದರು. ಹಾಲಿ ರಾಜ್ಯಸಭಾ ಸದಸ್ಯ ಅರುಣ್‍ಜೇಟ್ಲಿ, ಕೇಂದ್ರದ ಮಾಜಿ ಸಚಿವರಾದ ಸುಷ್ಮಾ ಸ್ವರಾಜ್ , ರಾಮ್‍ಜೇಟ್ ಮಲಾನಿ, ಮಾಜಿ ಶಾಸಕರಾದ ಪ್ರವೀಣ್ ಸಿ.ಕಮಲಾನಿ, ಉಮೇಶ್‍ಭಟ್, ಅರ್ಜುನ್‍ರಾವ್ ಕಿರೋಬಿಕರ್ ಹಾಗೂ ಪರಿಷತ್ ಸದಸ್ಯ ಸಿ.ವೀರಭದ್ರಯ್ಯ ಅವರುಗಳಿಗೆ ಸಂತಾಪ ಸೂಚಿಸಿದರು.

ಬಳಿಕ ಸಂತಾಪ ನಿರ್ಣಯದ ಪರವಾಗಿ ಆಡಳಿತ ಪಕ್ಷದ ನಾಯಕ ಹಾಗೂ ಸಚಿವ ಕೋಟಾ ಶ್ರೀನಿವಾಸ್‍ಪೂಜಾರಿ, ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಮತ್ತಿತರರು ಸಂತಾಪ ನಿರ್ಣಯದ ಮೇಲೆ ಮಾತನಾಡಿ ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು. ಮೃತರ ಗೌರವಾರ್ಥವಾಗಿ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

Facebook Comments