ಕರ್ನಾಟಕ ಬಜೆಟ್ – 2021 (All Updates)

ಈ ಸುದ್ದಿಯನ್ನು ಶೇರ್ ಮಾಡಿ

[ ಕರ್ನಾಟಕ ಬಜೆಟ್ – 2021 (All Updates) ]

ಇಂದು ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡನೆಯಾಗುತ್ತಿದೆ . ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇಂದು ವಿಧಾನಸೌದಧಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ . ಇದು ಯಡಿಯೂರಪ್ಪ ಅವರ 8ನೇ ಬಜೆಟ್ ಮಂಡನೆಯಾಗಿದೆ. # 

ಬೆಂಗಳೂರು, ಮಾ.8- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ 2021-22ನೆ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಬಜೆಟ್‍ನ ಒಟ್ಟು ಗಾತ್ರ 2.43 ಕೋಟಿ ರೂ.ಗಳಾಗಿದೆ. ಕಳೆದ ವರ್ಷ 2,33,137 ಕೋಟಿ ರೂ. ಗಾತ್ರದ ಬಜೆಟ್‍ನ್ನು ಮಂಡಿಸಿದ್ದರು. ಈ ಬಾರಿ ಅದಕ್ಕೆ 10,600 ಕೋಟಿ ರೂ.ಗಳಷ್ಟು ಹೆಚ್ಚುವರಿ ಸೇರ್ಪಡೆಯಾಗಿದೆ.

ಇದರಲ್ಲಿ 1,72,271 ರಾಜಸ್ವ ಜಮೆ ಹಾಗೂ 71,332 ಕೋಟಿ ಸಾಲ, 71,463 ಕೋಟಿ ಬಂಡವಾಳ ಜಮೆ ಎಂದು ಅಂದಾಜಿಸಲಾಗಿದೆ. 1,87,405 ಕೋಟಿ ರಾಜಸ್ವ ವೆಚ್ಚ, 44,237 ಕೋಟಿ ಬಂಡವಾಳ ವೆಚ್ಚ, 14,565 ಕೋಟಿ ಸಾಲ ಮರುಪಾವತಿ ಸೇರಿದಂತೆ ಒಟ್ಟು 2,46,207 ಕೋಟಿ ರೂ. ಬಜೆಟ್ ಖರ್ಚನ್ನು ಅಂದಾಜು ಮಾಡಲಾಗಿದೆ.

15,134 ಕೋಟಿ ರೂ. ರಾಜಸ್ವ ಕೊರತೆಯನ್ನು ಅಂದಾಜು ಮಾಲಾಗಿದ್ದು, ವಿತ್ತೀಯ ಕೊರತೆಯನ್ನು 59,240 ಕೋಟಿ ರೂ.ಗಳೆಂದು ನಿರೀಕ್ಷಿಸಲಾಗಿದೆ. ಇದು ರಾಜ್ಯದ ಜಿಡಿಪಿಯ ಶೇ.3.48ರಷ್ಟಿದೆ.2021-22ನೇ ಸಾಲಿನ ಕೊನೆಗೆ ರಾಜ್ಯದ ಸಾಲದ ಗಾತ್ರ 4,57,899 ಕೋಟಿ ರೂ.ಗಳಾಗಬಹುದು ಎಂಬ ನಿರೀಕ್ಷೆ ಇದ್ದು, ಇದು ರಾಜ್ಯದ ಒಟ್ಟು ಜಿಡಿಪಿಯ ಶೇ.26.9ರಷ್ಟು ಎಂದು ಸಿಎಂ ತಿಳಿಸಿದ್ದಾರೆ.

ರಾಜ್ಯದ ಸಾಲದ ಪ್ರಮಾಣ ಜಿಡಿಪಿಯಿಂದ ಶೇ.25ರಷ್ಟು ಮೀರಬಾರದು ಎಂಬ ನಿಯಮ ಇದೆ. ವಿತ್ತೀಯ ಕೊರತೆ ಶೇ.2.5ರ ಒಳಗೆ ನಿಯಂತ್ರಣದಲ್ಲಿರಬೇಕೆಂಬ ನಿಯಮಗಳಿದ್ದವು. ವಿತ್ತೀಯ ಕೊರತೆಯ ಪ್ರಮಾಣವನ್ನು ಕೇಂದ್ರ ಸರ್ಕಾರ ಕೋವಿಡ್ ಕಾರಣದಿಂದಾಗಿ ಸಡಿಲ ಮಾಡಿದೆ. ಈಗ ಸಾಲದ ಪ್ರಮಾಣ ಕೂಡ ಜಿಡಿಪಿ ಆದಾಯ ಮೀರಿ ಶೇ.1.9ರಷ್ಟು ಹೆಚ್ಚಾಗಿದೆ.

ನಷ್ಟ ಪರಿಹಾವರ ಸೇರಿದಂತೆ ಜಿಎಸ್‍ಟಿ ಆದಾಯ ಪ್ರಮಾಣವನ್ನು 1,24 ,202 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 8258 ಕೋಟಿ, ಕೇಂದ್ರ ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಾದ 24,273 ಕೋಟಿ ಹಾಗೂ 15,538ಕೋಟಿ ಸಹಾಯ ಧನವನ್ನು ನಿರೀಕ್ಷಿಸಲಾಗಿದೆ. ರಾಜಸ್ವ ಜಮೆಗೆ ಪೂರಕವಾಗಿ 71,332 ಕೋಟಿ ಸಾಲ ಪಡೆಯುವ ಸೂಚನೆಯನ್ನು ಯಡಿಯೂರಪ್ಪ ನೀಡಿದ್ದಾರೆ.

40 ಕೋಟಿ ಋಣೇತರ ಸ್ವೀಕೃತಿಗಳು, 91 ಕೋಟಿ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. ಸರ್ಕಾರದ ಒಡೆತನದಲ್ಲಿರುವ ನಿಗಮ ಮಂಡಳಿಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಆರ್ಥಿಕ ಸಾಮಥ್ರ್ಯಕ್ಕನುಗುಣವಾಗಿ 23,763 ಕೋಟಿ ಸಾಲ ಪಡೆದು ಸಂಪನ್ಮೂಲ ಕ್ರೂಢೀಕರಿಸಬಹುದೆಂದು ಸಿಎಂ ತಿಳಿಸಿದ್ದಾರೆ.

ಕಳೆದ ವರ್ಷ 2,33,134 ಕೋಟಿ ಆಯವ್ಯಯದಲ್ಲಿ 2,30,381 ಕೋಟಿ ರೂ. ಆದಾಯ ಜಮೆಯಾಗಿದೆ. ಕೋವಿಡ್ ಕಾರಣದಿಂದಾಗಿ ಸಂಪನ್ಮೂಲ ಕ್ರೂಢೀಕರಣ ಕಡಿಮೆಯಾಗಿದ್ದು, 1,59,709 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಇದರಲ್ಲಿ ಜಿಎಸ್‍ಟಿಯ ಪಾಲು 1,17,782 ಕೋಟಿ ರೂ.ಗಳು. 2019-20ನೇ ಸಾಲಿನ ಬಜೆಟ್‍ಗೆ (2,29,925 ಕೋಟಿ) ಹೋಲಿಸಿದರೆ 2020-21ನೇ ಸಾಲಿನ ಬಜೆಟ್‍ನಲ್ಲಿ ಶೇ.2.6ರಷ್ಟು ಹೆಚ್ಚಳವಾಗಿತ್ತು ಎಂದು ಸಿಎಂ ತಿಳಿಸಿದ್ದಾರೆ.

# BUDGET HIGHLIGHTS 

* ಪೆಟ್ರೋಲ್, ಡೀಸೆಲ್ ತೆರಿಗೆಯಲ್ಲಿ ಹೆಚ್ಚಳವಿಲ್ಲ.
* ಸೇವಾ ವಲಯಕ್ಕೆ 52,519 ಕೋಟಿ
* ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ
* ಮಹಿಳಾ ಉದ್ಯಮಿಗಳಿಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ.
* ಹಪ್ಪಳ, ಉಪ್ಪಿನಕಾಯಿ ತಯಾರಿಕರಿಗೆ ಆನ್‍ಲೈನ್ ಮಾರುಕಟ್ಟೆ
* ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ. ಸಾಲ
* ಬಿಎಂಟಿಸಿ ಬಸ್‍ಗಳಲ್ಲಿ ರಿಯಾಯ್ತಿ ದರದಲ್ಲಿ ಬಸ್ ಪಾಸ್

* ವನಿತಾ ಸಂಗಾತಿ ಹೆಸರಿನಲ್ಲಿ ಹೊಸ ಬಸ್ ಪಾಸ್
* ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿ
* ನಿರ್ಭಯಾ ಯೋಜನೆಯಡಿ ಬೆಂಗಳೂರಿನಲ್ಲಿ 7500 ಸಿಸಿ ಕ್ಯಾಮೆರಾ ಅಳವಡಿಕೆ
* ಎಪಿಎಂಸಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ
* ಜಿಲ್ಲಾ ಕೇಂದ್ರಗಳಲ್ಲಿ ಎರಡು ಶಿಶುಪಾಲನ ಕೇಂದ್ರಗಳು
* ಅಬಕಾರಿ ತೆರಿಗೆ ಹೆಚ್ಚಳ ಇಲ್ಲ
* ಗೋದಾಮು ಮತ್ತು ಅಂಗಡಿ ನಿರ್ಮಾಣಕ್ಕೆ ಅನುದಾನ
* ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ 6 ತಿಂಗಳು ಹೆರಿಗೆ ರಜೆ
* ಬಸವ ಕಲ್ಯಾಣ ಅಭಿವದ್ಧಿ 200 ಕೋಟಿ

* ಆದಿಚುಂಚನಗಿರಿ ಕ್ಷೇತ್ರಕ್ಕೆ 10 ಕೋಟಿ ಅನುದಾನ
* ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ 5 ಕೋಟಿ
* ಭೈರಪ್ಪ ಪರ್ವ ನಾಟಕ ಪ್ರದರ್ಶನಕ್ಕೆ 1 ಕೋಟಿ
* ಪಂಪ ಮುದ್ದಣ್ಣ ವೃತ್ತಿಗಳ ಡಿಜೀಟಲಿಕರಣ
* ಮಂಡ್ಯ ಕ್ರೀಡಾಂಗಣ ಉನ್ನತೀಕರಣ 10 ಕೋಟಿ
* ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ 2 ಕೋಟಿ
* ಪ್ರವಾಸಿ ತಾಣಗಳ ಅಭಿವೃದ್ಧಿಗೆ 500 ಕೋಟಿ
* ಕಬಿನಿ ಅಣೆಕಟ್ಟು ಕೆಳಗೆ ಉದ್ಯಾನವನ ನಿರ್ಮಾಣಕ್ಕೆ 50 ಕೋಟಿ
* ಕಡಲ ತೀರಗಳ ಅಭಿವೃದ್ಧೀಗೆ 10 ಕೋಟಿ

* ಕುಡಿತಿನಿ ಬೂದಿದಿಬ್ಬದ ಅಭಿವದ್ಧಿಗೆ 5 ಕೋಟಿ
* ತಡವಿಯಲ್ಲಿ ಸಾವಿರ ಎಕರೆ ಪರಿಸರ ಪ್ರವಾಸೋದ್ಯಮ ಪಾರ್ಕ್
* ಪ್ರವಾಸೋದ್ಯಮ ಇಲಾಖೆಗೆ ನಂದಿಗಿರಿಧಾಮ, ಕೆಮ್ಮನಗುಂಡಿ ವಿಸ್ತಾಂತರ
* ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ
* ಓಕಳಿಪುರಂದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಭವನ
* ಪಕ್ಷಿಪ್ರಬೇಧ ಸಂರಕ್ಷಣೆಗೆ 50 ಲಕ್ಷ ಅನುದಾನ
* ಉಪನಗರ ರೈಲು ಯೋಜನೆಗಳಿಗೆ 15, 767 ಕೋಟಿ , 6 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ
* ಎಕ್ಸ್ ಪೀರಿಯನ್ಸ್ ಬೆಂಗಳೂರು ಕೇಂದ್ರ ನಿರ್ಮಾಣ

* ವೃಕ್ಷ ಸಂಪತ್ತು ಹೆಚ್ಚಳಕ್ಕೆ ಸ್ಮೃತಿ ವನಗಳ ನಿರ್ಮಾಣ
* ಚಾಮರಾಜನಗರ, ಬೂಡಿಪಡಗದಲ್ಲಿ ಸಫಾರಿ ಆರಂಭಕ್ಕೆ 5 ಕೋಟಿ
* ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆ, 500 ಕೋಟಿ ಅನುದಾನ
* ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ 200 ಕೋಟಿ
* ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ 1500 ಕೋಟಿ
* ಶಿವಮೊಗ್ಗ ಆರ್ಯುವೇದ ಕಾಲೇಜು ಮೇಲ್ದರ್ಜೆಗೆ
* ಶಿವಮೊಗ್ಗ ಮೈಸೂರಿನಲ್ಲಿ ಕಿದ್ವಾಯಿ ಮಾದರಿ ಆಸ್ಪತ್ರೆ
* ಕಿತ್ತೂರು ಅಭಿವೃದ್ಧಿ ಪ್ರಾಕಾರಕ್ಕೆ 50 ಕೋಟಿ

* ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ
* 19 ಜಿಲ್ಲೆಗಳಿಗೆ 25 ಹಾಸಿಗೆಗಳ ಐಸಿಯು ನಿರ್ಮಾಣ
* ಉಪನಗರ ರೈಲ್ವೆ ಯೋಜನೆಗೆ 15 ಕೋಟಿ
* ಬೆಂಗಳೂರು, ಹೆಸರುಘಟ್ಟ 100 ಎಕರೆಯಲ್ಲಿ ಥೀಮ್ ಪಾರ್ಕ್
* ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣಗಳ ನಿರ್ಮಾಣ
* ಕೊಪ್ಪಳ ಸಿರಿವಾರದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್
* ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ
* ಗೊಬ್ಬರ ವಿತರಣೆಗೆ 10 ಕೋಟಿ ಅನುದಾನ
* ಮತ್ಸ್ಯದರ್ಶಿನಿ ಸ್ಥಾಪನೆಗೆ 30 ಕೋಟಿ

* ವನ್ಯಜೀವಿ ಸಫಾರಿಯೋಜನೆಗೆ 5 ಕೋಟಿ
* ಹಳದಿ ಎಲೆ ರೋಗದ ಸಂಶೋಧನೆಗೆ 25 ಕೋಟಿ
* ಪ್ರದಾನಮಂತ್ರಿ ಮತ್ಸ್ಯ ಯೋಜನೆಗೆ 62 ಕೋಟಿ
* 6 ಕೋಟಿ ವೆಚ್ಚದಲ್ಲಿ ಮೌಳ್ಯ ಸಂವರ್ಧನಕೇಂದ್ರಗಳ ರಚನೆ
* 5500 ಪಿಎಸಿಎಸ್ ಕಾರ್ಯಕ್ಷಮತೆ ಹೆಚ್ಚಳಕ್ಕೆ ಅನುದಾನ
* ಬೈಯಪ್ಪನಹಳ್ಳಿ 8 ಎಕರೆ ಪ್ರದೇಶದಲ್ಲಿ ಹೂವಿನ ಮಾರುಕಟ್ಟೆ
*ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ
* ಮೆಣಸಿನಕಾಯಿ ಬೆಳೆಗಾರರಿಗೆ ಸ್ಪರ್ಧಾತ್ಮಕ ಬೆಲೆ ನೀಡಲು ಕ್ರಮ
* ಮಹದಾಯಿ ಯೋಜನೆಗೆ 1677ಕೋಟಿ ಅನುದಾನ

# ಅಪಾರ್ಟ್‍ಮೆಂಟ್‍ ಖರೀದಿಸುವವರಿಗೆ ಬಜೆಟ್ ನಲ್ಲಿ ಗುಡ್ ನ್ಯೂಸ್..!
ಬೆಂಗಳೂರು, ಮಾ.8- ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರೋತ್ಸಾಹಿಸುವ ಸಲುವಾಗಿ ಅಪಾರ್ಟ್‍ಮೆಂಟ್‍ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಕಡಿಮೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ಮಧ್ಯಮವರ್ಗ ಕೈಗೆಟುಕುವ ಮನೆಗಳನ್ನು ಖರೀದಿಸಲು ಪ್ರೋತ್ಸಾಹಿಸುವ ಸಲುವಾಗಿ 35ರಿಂದ 45 ಲಕ್ಷಮೌಲ್ಯದೊಳಗಿನ ಅಪಾರ್ಟ್‍ಮೆಂಟ್‍ಗಳ ಖರೀದಿಯ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಲಾಗಿದೆ.

ಕಳೆದ ವರ್ಷ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 12,665 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗಿತ್ತು. ಫೆಬ್ರವರಿ ಅಂತ್ಯಕ್ಕೆ 9014 ಕೋಟಿ ಸಂಗ್ರಹವಾಗಿದೆ. ಮುಂದಿನ ವರ್ಷಕ್ಕೆ ಈ ಹಿಂದಿನ ವರ್ಷ ಇದ್ದಷ್ಟೇ (12,665ಕೋಟಿ) ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಬಕಾರಿ ಇಲಾಖೆಯ ಗುರಿ ನಿಗದಿಯಲ್ಲಿ ತುಸು ಏರಿಕೆ ಮಾಡಲಾಗಿದೆ. ಕಳೆದ ವರ್ಷ 22,700 ಕೋಟಿ ಗುರಿಯಲ್ಲಿ ಫೆಬ್ರವರಿ ಅಂತ್ಯಕ್ಕೆ 20900 ಕೋಟಿ ಸಂಗ್ರಹವಾಗಿದ್ದು, ಮುಂದಿನ ವರ್ಷಕ್ಕೆ 24,580 ಕೋಟಿ ರೂ. ನಿಗದಿ ಮಾಡಲಾಗಿದೆ. ಸಾರಿಗೆ ಇಲಾಖೆಯಲ್ಲಿ 7115 ಕೋಟಿ ರೂ. ಗುರಿ ನಿಗದಿ ಪಡಿಸಲಾಗಿತ್ತು. ಲಾಕ್‍ಡೌನ್ ಹಾಗೂ ಕೊರೊನಾದಿಂದಾಗಿ ಜನವರಿ ಅಂತ್ಯದವರೆಗೆ ಶೇ.60ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ ಮುಂದಿನ ವರ್ಷಕ್ಕೆ 7515 ಗುರಿ ನಿಗದಿಪಡಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

# ಆಡಳಿತ ಸೇವೆಗಳಲ್ಲಿ ಕನ್ನಡಿಗರ ಸೇರ್ಪಡೆ ಉತ್ತೇಜಿಸಲು ಸಾಮಥ್ರ್ಯ-ಸಾರಥ್ಯ ಕಾರ್ಯಕ್ರಮ
# ಶಿವಕುಮಾರ ಶ್ರೀ ಹಾಗೂ ಪೇಜಾವರ ಶ್ರೀ ಗೌರವಾರ್ಥ ಸ್ಮೃತಿವನ ನಿರ್ಮಾಣ
# ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ, 500 ಕೋಟಿ ಅನುದಾನ
# ಅಪಾರ್ಟ್‍ಮೆಂಟ್‍ ಖರೀದಿಸುವವರಿಗೆ ಬಜೆಟ್ ನಲ್ಲಿ ಗುಡ್ ನ್ಯೂಸ್..!
# ಎಪಿಎಂಸಿ ಮಾರುಕಟ್ಟೆಗಳ ಕಾರ್ಯಕ್ಷಮತೆ ಹೆಚ್ಚಳಕ್ಕೆ 198 ಕೋಟಿ
# ವಾಹನಗಳಿಗೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಮಹತ್ವದ ಘೋಷಣೆ
# 50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ

ಮಹಿಳಾ ದಿನದಂದೇ ನಾರಿಯರಿಗೆ ಸಿಎಂ ಬಂಪರ್ ಗಿಫ್ಟ್..!
“ಕೊರೋನಾ ಕಾರಣದಿಂದಾ ಬಜೆಟ್ ತಯಾರಿಸುವುದೇ ಕಷ್ಟವಾಯಿತು” : ಸಿಎಂ
ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ನೂರು ಕೋಟಿ ರೂ.
ಕೃಷಿ ಪೂರಕ ಚಟುವಟಿಕೆಗಳಿಗೆ 31,028 ಕೋಟಿ ಅನುದಾನ
ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು..? ಇಲ್ಲಿದೆ ಮಾಹಿತಿ
2021-22ನೆ ಸಾಲಿನ ಬಜೆಟ್ ಗಾತ್ರ ಎಷ್ಟು ಗೊತ್ತೇ..? ಇಲ್ಲಿದೆ ಬಿಎಸ್ವೈ ಲೆಕ್ಕಾಚಾರ
ಪೊಲೀಸ್ ಇಲಾಖೆಗೆ ಬಜೆಟ್ ನಲ್ಲಿ ಭರ್ಜರಿ ಕೊಡುಗೆ
ಬಜೆಟ್-2011 : ಪೆಟ್ರೋಲ್-ಡೀಸೆಲ್ ಸೇರಿ ಯಾವುದೇ ತೆರಿಗೆ ಏರಿಕೆ ಇಲ್ಲ

# ಎಪಿಎಂಸಿ ಮಾರುಕಟ್ಟೆಗಳ ಕಾರ್ಯಕ್ಷಮತೆ ಹೆಚ್ಚಳಕ್ಕೆ 198 ಕೋಟಿ
ಬೆಂಗಳೂರು, ಮಾ.8- ರಾಜ್ಯದಲ್ಲಿ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯಕ್ಷಮತೆ ಹೆಚ್ಚಿಸಲು 198 ಕೋಟಿ ವೆಚ್ಚದಲ್ಲಿ ಗಣಕೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಇಂದು ಮಂಡಿಸಿದ ಆಯವ್ಯಯದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಡಿಸಿಸಿ ಬ್ಯಾಂಕ್‍ನಲ್ಲಿ ಸರ್ಕಾರದ ಸಹಭಾಗಿತ್ವ ಪ್ರೋತ್ಸಾಹಿಸಲು ಷೇರು ಬಂಡವಾಳ ಹೆಚ್ಚಿಸುವ ಉದ್ದೇಶದಿಂದ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳಿಗೆ 10 ಲಕ್ಷ ರೂ.ಗಳ ಗರಿಷ್ಠ ಮಿತಿಗೊಳಪಟ್ಟು ಶೇ.25ರಷ್ಟು ಷೇರು ಬಂಡವಾಳ ನೀಡಲಾಗುವುದು ಎಂದರು.

ರೈತರು ಉತ್ಪಾದಿಸಿದ ಕೃಷಿ ಉತ್ಪನ್ನಗಳನ್ನು ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು, ಟಿಎಪಿಸಿಎಂಎಸ್ ಹಾಗೂ ಇತರೆ ಸಹಕಾರ ಸಂಸ್ಥೆಗಳು ಹೊಂದಿರುವ ಗೋದಾಮುಗಳಲ್ಲಿ ಸಂಗ್ರಹಿಸಿಡಲು ರೈತರು ಪಾವತಿಸುವ ಸಂಗ್ರಹಣಾ ಶುಲ್ಕದಲ್ಲಿ ಶೇ.25ರಷ್ಟು ಸಹಾಯ ಧನವನ್ನು ಸರ್ಕಾರದಿಂದ ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ 25 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪ್ರಾಥಮಿಕ ಕೃಷಿಪತ್ತಿನ ಸಂಘಗಳು. ಟಿಎಪಿಸಿಎಂಎಸ್ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಶೇಖರಣೆ ಮಾಡಿ ಮಾರುಕಟ್ಟೆ ಬೆಲೆ ಶೇ.60ರಷ್ಟು ಅಡಮಾನ ಸಾಲವನ್ನು ಶೇ.11ರ ಬಡ್ಡಿದರದಲ್ಲಿ ವಿತರಿಸುತ್ತಿವೆ.  ಸದರಿ ಸಾಲಗಳ ಮೇಲೆ ಗರಿಷ್ಠ ಆರು ತಿಂಗಳಿಗೆ ಶೇ.4ರ ಬಡ್ಡಿ ಸಹಾಯಧನವನ್ನು ರಾಜ್ಯ ಸರ್ಕಾರ ನೀಡಲು 5 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ನೀಡಲಾಗಿದೆ.

# 50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ
ಬೆಂಗಳೂರು, ಮಾ.8- ಯಶವಂತಪುರ ಎಪಿಎಂಸಿ ವತಿಯಿಂದ ಬಯ್ಯಪ್ಪನಹಳ್ಳಿಯ 8 ಎಕರೆ ಜಮೀನಿನಲ್ಲಿ 50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಿಸಲು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಡಿಸಿದ ಆಯವ್ಯಯದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಸಿಂಗೇನ ಅಗ್ರಹಾರದ ಹಣ್ಣು ಮಾರುಕಟ್ಟೆಗೆ ಹೊಂದಿಕೊಂಡಿರುವ ಗುಳಿಮಂಗಲ ಗ್ರಾಮದ 42 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಲದಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಒಣ ಮೆಣಸಿನಕಾಯಿ ಮಾರುಕಟ್ಟೆಯನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಮೆಣಸಿನಕಾಯಿ ಬೆಳೆಯುವ ರೈತರಿಗೆ ಸ್ಪರ್ಧಾತ್ಮಕ ದರ ಒದಗಿಸಲು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಧುನಿಕ ಗುಣ ವಿಶ್ಲೇಷಣಾ ಘಟಕವನ್ನು 4 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

# ಮೀನು ಉತ್ಪಾದನಾ ಕೇಂದ್ರದ ಉನ್ನತೀಕರಣಕ್ಕೆ 2 ಕೋಟಿ
ಬೆಂಗಳೂರು, ಮಾ.8- ರಾಜ್ಯದ 16 ಮೀನುಮರಿ ಉತ್ಪಾದನಾ ಕೇಂದ್ರದ ಉನ್ನತೀಕರಣಕ್ಕೆ ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.2020-21ನೆ ಸಾಲಿನ ಬಜೆಟ್‍ನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ರಾಜ್ಯದ 137 ಕೋಟಿ ರೂ.ಗಳ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, 2021-22ನೆ ಸಾಲಿನಲ್ಲಿ 376 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಈ ಉದ್ದೇಶಕ್ಕೆ 2021-22ನೆ ಸಾಲಿನಲ್ಲಿ 62 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಫಂಗೇಸಿಯಸ್ ತಿಲಾಪಿಯಾ ಮೀನುಗಳನ್ನು ಶೀಥಲೀಕೃತ ಉತ್ಪನ್ನಗಳಾಗಿ ಸಂಸ್ಕರಣೆಗೊಳಿಸಲು ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧನ ಕೇಂದ್ರವನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ 6 ಕೊಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಮೀನಿನ ಮಾರಾಟ ಉತ್ತೇಜಿಸಲು, ಮೀನಿನ ಪ್ರಬೇಧಗಳ ಕುರಿತು ಅರಿವು ಮೂಡಿಸಲು, ಮತ್ಸ್ಯದರ್ಶಿನಿಗಳನ್ನು 30 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.

# ಜಿಎಸ್‍ಟಿ ಸಂಗ್ರಹದ ಗುರಿ ಕಡಿತ
ಬೆಂಗಳೂರು, ಮಾ.8-ಕೊರೊನಾದಿಂದ ಉಂಟಾದ ಆರ್ಥಿಕ ಹಿನ್ನಡೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಾರಿ ಜಿಎಸ್‍ಟಿ ಸಂಗ್ರಹದ ಗುರಿಯನ್ನು ಕಡಿಮೆ ಮಾಡಿದ್ದಾರೆ. ಕಳೆದ ವರ್ಷ 82,443 ಕೋಟಿ ರೂ. ಗುರಿ ನಿಗದಿಯಾಗಿತ್ತು. ಫೆಬ್ರವರಿ ಅಂತ್ಯದವರೆಗೆ 71,833 ಕೋಟಿ ರೂ. ಸಂಗ್ರಹವಾಗಿದೆ. ಹೀಗಾಗಿ 2021-22ನೇ ಸಾಲಿಗೆ 76,473 ಕೋಟಿ ರೂ. ಜಿಎಸ್‍ಟಿ ಸಂಗ್ರಹದ ಗುರಿಯನ್ನು ವಾಣಿಜ್ಯ ತೆರಿಗೆ ಇಲಾಖೆಗೆ ನಿಗದಿ ಪಡಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಇದು ಕಳೆದ ವರ್ಷದ ಗುರಿಗಿಂತಲೂ 5,970 ಕೋಟಿ ರೂ. ಕಡಿಮೆಯಾಗಿದೆ. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಎರಡನೇ ರಾಜ್ಯವಾಗಿದೆ. ಉತ್ತಮ ತೆರಿಗೆ ಅನುಪಾಲನೆಯನ್ನು ಖಚಿತಪಡಿಸಿಕೊಳ್ಳಲು ತೆರಿಗೆ ವಂಚನೆ ತಡೆಗಟ್ಟಲು ವಾಣಿಜ್ಯ ತೆರಿಗೆ ಮುಂಚೂಣಿಯಲ್ಲಿದೆ.

ತೆರಿಗೆ ದಾರರ ಅನುಪಾಲನೆ ಮೇಲೆ ನಿಗಾ ವಹಿಸಲು ಜಿಎಸ್‍ಟಿ ಫ್ರೈಮ್ ಎಂಬ ಸಾಫ್ಟ್‍ವೇರ್ ಬಳಸಲಾಗುತ್ತಿದೆ. 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಜಿಎಸ್‍ಟಿ ಲೆಕ್ಕ ಪರಿಶೋಧನೆಯನ್ನು ಸುಗಮವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ವಾಣಿಜ್ಯ ತೆರಿಗೆಯನ್ನು ಎನ್‍ಐಸಿ ಸಹಯೋಗದಲ್ಲಿ ಜಿಎಸ್‍ಟಿ ಇ-ಶೋಧನೆ ಎಂಬ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

ಈ ಹಿಂದಿನ ಲೆಕ್ಕ ಪರಿಶೋಧನೆಯನ್ನು ಪೂರ್ಣಗೊಳಿಸುವ ಹಾಗೂ ತೆರಿಗೆ ಬಾಕಿಯನ್ನು ತ್ವರಿತ ಗತಿಯಲ್ಲಿ ವಸೂಲಿ ಮಾಡಲು ಜಿಎಸ್‍ಟಿ ಪೂರ್ವದ ಕಾಯ್ದೆಗಳಿಗೆ ಸಂಬಂಸಿದಂತೆ ಕರ ಸಮಾಧಾನ ಯೋಜನೆ 2020-21ಅನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

# ಬಜೆಟ್ ಮಂಡನೆಗೂ ಮುನ್ನ ಸಿಎಂ ದೇವರ ದರ್ಶನ : 
ಬೆಂಗಳೂರು,ಮಾ.8- ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವರ ದರ್ಶನ ಪಡೆದರು. ನಗರದ ಶೇಷಾದ್ರಿಪುರಂನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ದರ್ಶನ ಪಡೆದು ಪುನೀತರಾದರು.  ಸಾಮಾನ್ಯವಾಗಿ ಯಡಿಯೂರಪ್ಪನವರು ಯಾವುದೇ ಶುಭ ಕಾರ್ಯ ಮಾಡುವಾಗ ದೇವರ ದರ್ಶನ ಪಡೆಯುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.  ಮುಖ್ಯಮಂತ್ರಿಯಾಗಿ ಅಕಾರ ಸ್ವೀಕರಿಸುವ ಮುನ್ನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದರು. ಇಂದು ಕೂಡ ಬಜೆಟ್ ಮಂಡಿಸುವ ಮುನ್ನ ತಮ್ಮ ಆಪ್ತರ ಜೊತೆ ದೇವಸ್ಥಾನಕ್ಕೆ ಹೋಗಿ ರಾಯರ ದರ್ಶನ ಪಡೆದುಕೊಂಡರು.

 

Facebook Comments

Sri Raghav

Admin