BIG NEWS : ನಾಳೆ ಸಂಜೆ ಸಂಪುಟ ವಿಸ್ತರಣೆ, 8 ಮಂದಿ ಶಾಸಕರಿಗೆ ಸಚಿವ ಪಟ್ಟ, ಇಲ್ಲಿದೆ ಲಿಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

rahul02
ಬೆಂಗಳೂರು. ಡಿ. 21 : ಭಾರಿ ಕುತೂಹಲ ಕೆರಳಿಸಿದ್ದ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕೊನೆಗೂ ಅಂತ್ಯವಾಗಿದ್ದು, ಕಾಂಗ್ರೆಸ್’ನ 8 ಮಂದಿ ಶಾಸಕರಿಗೆ ಸಚಿವಗಿರಿ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.  ಶನಿವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕಾರ ನಡೆಸುವುದು ಖಚಿತವಾಗಿದೆ.  ಶುಕ್ರವಾರ ನವದೆಹಲಿಯಲ್ಲಿ ರಾಜ್ಯದ ಕಾಂಗ್ರೆಸ್ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸಚಿವ ಸ್ಥಾನಕ್ಕೆ ನೇಮಕವಾಗಬೇಕಾದ ಶಾಸಕರ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಜೆ ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಯಾರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದ್ದು, ಮುಖಂಡರು ಮುಂದಿಟ್ಟ ಹೆಸರುಗಳಿಗೆ ರಾಹುಲ್ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಒಟ್ಟು 8 ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು ಖಚಿತವಾಗಿದ್ದು, ಶನಿವಾರ ಸಂಜೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಸಿ.ಎಸ್.ಶಿವಳ್ಳಿ, ಇ.ತುಕಾರಾಂ, ಎಂ.ಟಿ.ಬಿ.ನಾಗರಾಜ್, ರಹೀಂಖಾನ್, ಪಿ.ಟಿ.ಪರಮೇಶ್ವರ್ ನಾಯ್ಕ್ ಮತ್ತು ಎಂ.ಬಿ.ಪಾಟೀಲ್ ಗೆ ಮಂತ್ರಿ ಪಟ್ಟ ಸಿಗುವುದು ಖಚಿತ ಆಗಿದೆ.

ಬಂಡಾಯವೇಳುವ ಮೂಲಕ ಮೈತ್ರಿ ಸರ್ಕಾರಕ್ಕೆ ನಿರಂತರವಾಗಿ ನಡುಕ ಹುಟ್ಟಿಸಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಮೇಶ್ ಅವರ ಬದಲು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸುವ ಸಾಧ್ಯತೆ ಇದೆ. ಪಕ್ಷದ ಆಂತರಿಕ ಸಮಸ್ಯೆಗಳ ಕಾರಣ ಸತೀಶ್ ಜಾರಕಿಹೊಳಿ ಕೂಡ ಬಂಡೆದಿದ್ದರು. ಆದರೆ, ಬಳಿಕ ಸರ್ಕಾರದ ಜೊತೆಗಿರುವುದಾಗಿ ಹೇಳಿಕೆ ನೀಡಿದ್ದರು. ರಮೇಶ್ ಜಾರಕಿಹೊಳಿ ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟುಮಾಡಿದ್ದರು.

# ಮ್ಯಾಜಿಕ್ ಮ್ಯಾಪ್ ನಿಂದ ರಹೀಂ ಖಾನ್ ಅವಕಾಶ

Magic map
ರಹೀಂ ಖಾನ್ ಗೆ ಮ್ಯಾಜಿಕ್ ಮ್ಯಾಪ್ ಅವಕಾಶ ತಂದುಕೊಟ್ಟಿದೆ. ಎಲ್ಲರಿಗೂ ಮ್ಯಾಪ್ ತೋರಿಸಿ ರಹೀಂ ಖಾನ್ ಮನಗೆದ್ದಿದ್ದಾರೆ. ಕರ್ನಾಟಕದ ಮ್ಯಾಪ್ ತೋರಿಸಿ ಮನಗೆದ್ದ ರಹೀಂ ಖಾನ್, ಬೆಂಗಳೂರಿನಿಂದ ಬೀದರ್ ವರೆಗೆ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲ, ಇದನ್ನು ಮ್ಯಾಪ್ ಮೂಲಕ ವಿಸ್ತರಿಸಿ ಹೇಳಿದ್ದ ರಹೀಂ ಖಾನ್ ಗೆ ನೋಡಿದವರೆಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

# 18 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಲಾಗಿದ್ದು, ಪಟ್ಟಿ  ಈ ಕೆಳಕಂಡಂತಿದೆ

Congress--01

Congress--02

 

Facebook Comments

Sri Raghav

Admin