ಮೀನು ಆಮದು ಮೇಲಿನ ನಿರ್ಬಂಧ ತೆರವುಗೊಳಿಸಿದ ಗೋವಾ..?

ಈ ಸುದ್ದಿಯನ್ನು ಶೇರ್ ಮಾಡಿ

Fish--01

ಪಣಜಿ, ನ.30-ಮೀನು ಆಮದು ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಗೋವಾ ಸರ್ಕಾರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಈ ಸಂಬಂಧ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಮೀನು ಆಮದು ಮೇಲಿನ ನಿರ್ಬಂಧವನ್ನು ತೆಗೆದು ಹಾಕಬೇಕು.

ಗೋವಾ ಕರ್ನಾಟಕ ಮತ್ತು ಗೋವಾ ನಡುವಣ ಮತ್ಸ್ಯ ವಹಿವಾಟಿಗೆ ಅವಕಾಶ ನೀಡಬೇಕು ಹಾಗೂ ಕರ್ನಾಟಕ ಮತ್ತು ಇತರ ರಾಜ್ಯಗಳು ಮೀನು ಮಾರಾಟ ವ್ಯವಹಾರಕ್ಕಾಗಿ ಗೋವಾ ಮಾರ್ಗದ ಮೂಲಕ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಅವರು ನ.27ರಂದು ಬರೆದಿರುವ ಪತ್ರ ತಲುಪಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ. ಮೀನುಗಳನ್ನು ಹಾನಿಕಾರಕ ಫಾರ್ಮಲಿನ್ ದ್ರಾವಣದಲ್ಲಿ ಸಂರಕ್ಷಿಸಿಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಗೋವಾ ನ.10ರಂದು ತನ್ನ ರಾಜ್ಯದಲ್ಲಿ ಆರು ತಿಂಗಳ ಕಾಲ ಮೀನು ಆಮದು ಮೇಲೆ ನಿರ್ಬಂಧ ವಿಧಿಸುವುದಾಗಿ ಪ್ರಕಟಿಸಿತ್ತು.

ಕರ್ನಾಟಕದ ಮೀನು ಬಳಕೆ ಮಾಡುವುದರಿಂದ ಕ್ಯಾನ್ಸರ್ ಭಯದಿಂದಾಗಿ, ನವೆಂಬರ್ 10 ರಂದು ಗೋವಾ ಸರ್ಕಾರ ಕರ್ನಾಟಕ ಮೀನಿನ ಮೇಲೆ ನಿಷೇಧ ಹೇರಿತ್ತು,  ಮೀನುಗಳ ಸಂಸ್ಕರಣೆಗೆ ಬಳಸುವ ರಾಸಾಯನಿಕದಿಂದಾಗಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಹೇಳಲಾಗಿತ್ತು.  ಕರ್ನಾಟಕ ಮುಖ್ಯಮಂತ್ರಿ ಕುಮಾರ ಸ್ವಾಮಿ ನವೆಂಬರ್ 27 ರಂದು ತಮ್ಮ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯದ ಮೀನಿನ ಮೇಲೆ ಹೇರಿರುವ ನಿಷೇಧ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ  ತಿಳಿಸಿದ್ದಾರೆ.

# ನಿಷೇಧ ರದ್ದಿಗೆ ಗೋವಾ ಒಪ್ಪಿಗೆ :
ಗೋವಾ ಸರಕಾರ ಕರ್ನಾಟಕದಿಂದ ಮೀನು ಆಮದಿಗೆ ನಿಷೇಧ ಹೇರಿದ್ದನ್ನು ರದ್ದುಗೊಳಿಸುವ ಸಂಬಂಧ ಅಲ್ಲಿನ ಸರಕಾರದೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂದು ಕರಾವಳಿಯ ಸಂಸದರು, ಬಿಜೆಪಿ ಶಾಸಕರು ಹಾಗೂ ಮೀನುಗಾರಿಕಾ ಮುಖಂಡರನ್ನೊಳಗೊಂಡ ನಿಯೋಗ ತಿಳಿಸಿದೆ. ಗೋವಾ ಸ್ಪೀಕರ್‌ ಪ್ರಮೋದ್‌ ಸಾವಂತ್‌, ಆರೋಗ್ಯ ಸಚಿವ ವಿಶ್ವಜೀತ್‌ ಪಿ.ರಾಣೆ, ಮೀನುಗಾರಿಕಾ ಸಚಿವ ವಿನೋದ್‌ ಪಾಲಿನರ್ಸ್‌ ಅವರೊಂದಿಗೆ ಅಲ್ಲಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ ಅವರೊಂದಿಗೆ ಗೋವಾದಲ್ಲಿ ಬುಧವಾರ ನಡೆದ ಮಹತ್ವದ ಮಾತುಕತೆಯಲ್ಲಿ ಗೋವಾ ಸರಕಾರ ಕೆಲವು ಷರತ್ತುಗಳನ್ನು ಹೇಳಿದ್ದು ಅದನ್ನು ಕರ್ನಾಟಕದ ನಿಯೋಗ ಒಪ್ಪಿಕೊಂಡಿದೆ.

Facebook Comments