ಕರ್ನಾಟಕದಲ್ಲಿ 11ಕ್ಕೆರಿದ ಕೊರೋನಾ ಸಾವಿನ ಸಂಖ್ಯೆ..! ಚಿಕ್ಕಬಳ್ಳಾಪುರದ ವ್ಯಕ್ತಿ ಮಹಾಮಾರಿಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ಮಹಾಮಾರಿ ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಕುರಿತು ಅಧಿಕೃತವಾಗಿ ಟ್ವಿಟ್ ಮೂಲಕ ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು, ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿನಿಂದ ಮೃತ ಪಟ್ಟಿದ್ದಾರೆ.

ಪಾರ್ಥಿ‍ವ ಶರೀರವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಲು ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ದಯಮಾಡಿ ಸಾರ್ವಜನಿಕರು ಮನೆಯಲ್ಲೆ ಇರಿ. ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.ಈ ಮೂಲಕ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 11ಕ್ಕೇರಿಕೆಯಾಗಿದೆ. ನಿನ್ನೆ ಒಂದೇ ದಿನ 4 ಮಂದಿ ಮೃತ ಪಟ್ಟಿದ್ದರು.

ಕಲ್ಬುರ್ಗಿಯಲ್ಲಿ 205 ಸಂಖ್ಯೆ 55 ವರ್ಷದ ವ್ಯಕ್ತಿ, ಬೆಂಗಳೂರು ನಗರದಲ್ಲಿ 219 ಸಂಖ್ಯೆಯ 76 ವರ್ಷದ ವ್ಯಕ್ತಿ ಹಾಗೂ 252 ಸಂಖ್ಯೆ 65 ವರ್ಷದ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದರು. ವಿಜಯಪುರದಲ್ಲಿ 69 ವರ್ಷದ 257 ಸಂಖ್ಯೆಯ ರೋಗಿಯೂ ಮೃತ ಪಟ್ಟಿದ್ದರು.ಈ ಮೊದಲು ಚಿಕ್ಕಬಳ್ಳಾಪುರಲ್ಲಿ 70 ವರ್ಷದ ಮಹಿಳೆಯೊಬ್ಬರು ಮಾರ್ಚ್ 26ರಂದು ಮೃತ ಪಟ್ಟಿದ್ದರು.

ಸೌದಿ ಪ್ರವಾಸ ಮಾಡಿ ಮರಳಿದ ಕುಟುಂಬದ ಸದಸ್ಯರಿಂದ ಚಿಕ್ಕಬಳ್ಳಾಪುರಲ್ಲಿ ಕಾಣಿಸಿಕೊಂಡ ಸೋಂಕು ಲಾಕ್ ಡೌನ್, ಸಿಲ್ ಡೌನ್ ಮಾಡಿದ್ದರು ನಿಯಂತ್ರಣಕ್ಕೆ ಬಂದಿಲ್ಲ. ಒಟ್ಟು 13 ಮಂದಿ ಸೋಂಕಿತರು ಪತ್ತೆಯಾಗಿದ್ದು, ಎಂಟು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ನಾಲ್ಕು ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಒಬ್ಬರು ಮೃತ ಪಟ್ಟಿರುವುದಾಗಿ ಖಚಿತ ಪಡಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು ಇಬ್ಬರು ಸೋಂಕಿಗೆ ಬಲಿಯಾದಂತಾಗಿದೆ.

Facebook Comments

Sri Raghav

Admin