1.7 ಲಕ್ಷ ರೈತರ ಸಾಲದ ಖಾತೆಗಳಿಗೆ 876 ಕೋಟಿ ರೂ. ಹಣ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Formers--01

ಬೆಂಗಳೂರು, ಜನವರಿ 14- ಜನವರಿ 11 ರ ವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 1.1 ಲಕ್ಷ ಸಹಕಾರಿ ಬ್ಯಾಂಕುಗಳ ಸಾಲಖಾತೆಗಳಿಗೆ 616 ಕೋಟಿ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 58 ಸಾವಿರ ಸಾಲಖಾತೆಗಳಿಗೆ 260 ಕೋಟಿ ರೂ. ರೈತರ ಬೆಳೆಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲಾಗಿದೆ.

ಈ ಎರಡೂ ಬ್ಯಾಂಕುಗಳಲ್ಲಿ ಒಟ್ಟು 1.7 ಲಕ್ಷ ಸಾಲ ಖಾತೆಗಳಳಿಗೆ 876 ಕೋಟಿ ರೂ. ಗಳಷ್ಟು ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಿದಂತಾಗಿದೆ. ಜನವರಿ 11 ರ ವರೆಗೆ ಒಟ್ಟು 10 ಲಕ್ಷಕ್ಕೂ ಹೆಚ್ಚು ರೈತರು ಸಾಲ ಮನ್ನಾ ಯೋಜನೆಗಾಗಿ ಅರ್ಹತೆ ಹೊಂದಿದ್ದು, ಸಹಕಾರಿ ಬ್ಯಾಂಕುಗಳ ಹಾಗೂ ವಾಣಿಜ್ಯ ಬ್ಯಾಂಕುಗಳ ಸಾಲ ಖಾತೆಗಳ ಜಿಲ್ಲಾವಾರು ವಿವರ ಇದರೊಂದಿಗೆ ಲಗತ್ತಿಸಿದೆ.

ಸಾಲಖಾತೆಗಳಿಗೆ ಮನ್ನಾ ಮೊತ್ತವನ್ನು ಈ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ನಿಯಮಿತವಾಗಿ ಪಾವತಿಸಲಾಗುತ್ತಿದೇ.  ಸಹಕಾರಿ ಬ್ಯಾಂಕುಗಳಲ್ಲಿ ಸಾಲವನ್ನು ತೀರಿಸುವ ವಾಯಿದೆ ಮುಗಿದ ನಂತರ ಮನ್ನಾ ಮೊತ್ತ ಬಿಡುಗಡೆ ಮಾಡಲಾಗುತ್ತದೆ.

Green-List-as-on-11.1.19

 

Green-List-as-on-11.1.19-2

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin