ವಿವಾದಾತ್ಮಕ ಒಳ ಉಡುಪುಗಳ ಚಿತ್ರ ತೆಗೆದು ಹಾಕಿದ ಅಮೇಜಾನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕನ್ನಡ ಬಾವುಟದ ಬಣ್ಣ, ಲಾಂಛನದ ಚಿತ್ರ ಹೊಂದಿರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟಕ್ಕಿಟ್ಟು ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದ ಅಮೇಜಾನ್ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆ ವಿವಾದಾತ್ಮಕ ಚಿತ್ರವನ್ನು ಬದಲಿಸಿದೆ.

ಕನ್ನಡ ಬಾವುಟದ ಬಣ್ಣ, ಲಾಂಛನ ಹಾಗೂ ಭಾರತದ ಅಶೋಕ ಚಕ್ರದ ಚಿತ್ರ ಹೊಂದಿರುವ ಮಹಿಳೆಯರ ಒಳ ಉಡುಪುಗಳನ್ನು ಶಾಪಿಂಗ್ ಆಯ್ಕೆಗೆ ಇಡಲಾಗಿತ್ತು. ಃಊಆಒಊಊಊ ಎಂಬ ಬ್ರ್ಯಾಂಡ್‌ನ ಒಳ ಉಡುಪು ಇದಾಗಿದ್ದು, ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೇಜಾನ್ ವೆಬ್‌ಸೈಟ್‌ನಲ್ಲಿ ಇದು ಕಂಡುಬಂದಿತ್ತು.

ಕನ್ನಡ ಬಾವುಟ ಹಾಗೂ ಲಾಂಛನವನ್ನು ಈ ರೀತಿ ಬಳಸಿಕೊಂಡು ನಾಡಿನ ಗೌರವಕ್ಕೆ ಚ್ಯುತಿ ತಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಖಂಡಿಸಿದ್ದರು. ಈ ನಡೆಗೆ ಕನ್ನಡ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಗತಿ ಕುರಿತು ಪ್ರತಿಕ್ರಿಯಿಸಿದ್ದ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ, ಕನ್ನಡ ನಾಡಿನ ಗೌರವಕ್ಕೆ ಚ್ಯುತಿ ತಂದಿರುವ ಅಮೇಜಾನ್ ಆನ್‌ಲೈನ್ ಶಾಪಿಂಗ್ ಸಂಸ್ಥೆ ವಿರುದ್ಧ ಕರ್ನಾಟಕ ಸರ್ಕಾರದಿಂದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

Facebook Comments

Sri Raghav

Admin