ನೆರೆ ಸಂತ್ರಸ್ತರ ನೆರವಿಗೆ ಬಂದು ಮಾನವಿಯತೆ ಮೆರೆದ ನರಸಗೊಂಡನಹಳ್ಳಿ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ. 12- ಉತ್ತರಕರ್ನಾಟಕ, ಕರಾವಳಿ ತೀರಪ್ರದೇಶ, ಮಲೆನಾಡು, ಮಧ್ಯಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂತ್ರಸ್ತರಾದವರಿಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ನರಸಗೊಂಡನಹಳ್ಳಿ ಗ್ರಾಮಸ್ಥರು ನೆರೆಪರಿಹಾರ ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.

ಸಂತ್ರಸ್ತರಿಗೆ 40ಕ್ವಿಂಟಾಲ್ ಅಕ್ಕಿ, ಸೀರೆ, ಪಂಚೆ, ಹೊದಿಕೆ, ಕುಡಿಯುವ ನೀರಿನ ಬಾಟಲ್, ಬಿಸ್ಕೆಟ್, ಹಣ್ಣು, ತರಕಾರಿ, ಬೆಳೆ, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಗ್ರಾಮದಿಂದ ಸಂಗ್ರಹಿಸಿ ಸಂತ್ರಸ್ತರಿಗೆ ಹಸ್ತಾಂತರ ಮಾಡಿದರು.

ಇಂದು ನೆರೆಪರಿಹಾರವನ್ನು ಗ್ರಾಮದಿಂದ ಟ್ಯಾಕ್ಟರ್ ಮೂಲಕ ಹೊನ್ನಾಳಿಗೆ ಸಾಗಿಸಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮುಂದಾಳತ್ವದಲ್ಲಿ ಉತ್ತರಕರ್ನಾಟಕ್ಕೆ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು.

ಗ್ರಾಮದ ಮುಖಂಡರಾದ ವೈ.ಎಂ.ಶಾಂತರಾಜ್, ಎನ್.ಎಚ್.ರವೀಂದ್ರ, ಮಂಜುನಾಥ್, ಅಶೋಕ್, ಡಿ.ಎಚ್.ರಮೇಶ್ ಸೇರಿದಂತೆ ಮತ್ತಿರರು ಗ್ರಾಮದಲ್ಲಿ ನೆರೆಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin