ಲಾಕ್‌ಡೌನ್‌ 2ನೇ ದಿನ : ಪೊಲೀಸರಿಗೆ ಹೆದರಿ ಮನೆ ಸೇರಿದ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು- ಪೊಲೀಸರ ಲಾಠಿ ರುಚಿ ಹಾಗೂ ಸರ್ಕಾರದ ಬಿಗಿಯಾದ ನಿಯಮದಿಂದ ಎರಡನೆ ದಿನದ ಲಾಕ್‌ಡೌನ್‌ಗೆ ಇಂದು ನಿರೀಕ್ಷೆೆಗೆ ಮೀರಿದ ಬೆಂಬಲ ವ್ಯಕ್ತವಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ದಿಗ್ಬಂಧನ ಹಾಕಿಕೊಂಡಿದ್ದಾರೆ.ಮನೆಯಿಂದ ಆಚೆ ಬಂದರೆ ವಾಹನಗಳನ್ನು ಜಪ್ತಿ ಮಾಡಬಹುದೆಂಬ ಭೀತಿ , ಲಾಠಿ ರುಚಿ, ದಂಡ ಇತ್ಯಾದಿ ಕಾರಣಗಳಿಂದ ಬೆದರಿದ ಸಾರ್ವಜನಿಕರು ಇಂದು ಬಹುತೇಕ ಕಡೆ ಮನೆಯಿಂದ ಹೊರ ಬಾರದೆ ತಮಗೆ ತಾವೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಲಾಕ್‌ಡೌನ್ ಜಾರಿಯಲ್ಲಿದ್ದರೂ ಅಷ್ಟಿಿಷ್ಟು ಸಂಖ್ಯೆೆಯಿಂದ ಗಿಜಿಗುಡುತ್ತಿಿದ್ದ ಬೆಂಗಳೂರು, ಮೈಸೂರು , ಚಾಮರಾಜನಗರ, ಮಂಡ್ಯಘಿ, ರಾಮನಗರ, ಚಿಕ್ಕಬಳ್ಳಾಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗಘಿ, ಉಡುಪಿ, ಮಂಗಳೂರು, ಉತ್ತರ ಕನ್ನಡ , ಬೆಳಗಾವಿ, ಧಾರವಾಡ, ಬಳ್ಳಾಾರಿ, ಕಲ್ಬುರ್ಗಿ ಸೇರಿದಂತೆ ಎಲ್ಲೆೆಡೆ ಬಿಕೋ ಎನ್ನುವ ಪರಿಸ್ಥಿಿತಿ ನಿರ್ಮಾಣವಾಗಿತ್ತು.

ಕೋವಿಡ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆೆ ಹೆಚ್ಚುತ್ತಿಿರುವ ಕಾರಣ ಜನರೇ ಬಹುತೇಕ ಕಡೆ ಸ್ವಯಂ ಪ್ರೇರಿತರಾಗಿ ತಮಗೆ ತಾವೇ ನಿರ್ಬಂಧ ವಿಧಿಸಿಕೊಂಡಿದ್ದರು. ಹೀಗಾಗಿ ರಾಜ್ಯದ ಬಹುತೇಕ ಕಡೆ ಬಸ್ ನಿಲ್ದಾಾಣ, ಮಾರುಕಟ್ಟೆೆ , ಆಟೋ ನಿಲ್ದಾಾಣ, ರೈಲ್ವೆೆ ನಿಲ್ದಾಾಣ, ಶಾಪಿಂಗ್ ಮಾಲ್‌ಗಳು ಸೇರಿದಂತೆ ಬಹುತೇಕ ಕಡೆ ಅಘೋಷಿತ ಬಂದ್ ನಿರ್ಮಾಣವಾಗಿತ್ತು.

ರಾಜ್ಯದಲ್ಲಿ ಬೆಂಗಳೂರಿನಲ್ಲಿರುವ ಎಜೆಪಿ ರಸ್ತೆೆಯಲ್ಲಿರುವ ಹೂವಿನ ಮಾರುಕಟ್ಟೆೆಯನ್ನು ಬೆಳ್ಳಂ ಬೆಳಗ್ಗೆೆ ಬಂದ್ ಮಾಡಿದ್ದರು. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾಾರಿಕೇಡ್‌ಗಳನ್ನು ಹಾಕಿ ಯಾರೂ ಪ್ರವೇಶಿಸದಂತೆ ನಿರ್ಬಂಧ ಹಾಕಿದ್ದರು. ಪ್ರತಿ ದಿನ ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿಿದ್ದ ಎಸ್‌ಜೆಪಿ ರಸ್ತೆೆ ಇಂದು ಖಾಲಿ ಖಾಲಿಯಾಗಿತ್ತು. ಕೆ.ಆರ್.ಮಾರ್ಕೆಟ್‌ಯಲ್ಲಿ ಕೂಡ ಇಂದು ಜನಸಂಖ್ಯೆ ತೀರಾ ವಿರಳವಾಗಿತ್ತು.

ಕೇವಲ ಅಗತ್ಯ ವಸ್ತುಗಳ ಸಾಗಣೆ ಮಾಡುತ್ತಿಿದ್ದ ವಾಹನಗಳಿಗೆ ಅನುಮತಿ ಕೊಡಲಾಗಿತ್ತು. ಹೀಗಾಗಿ ಈ ಹಿನ್ನೆೆಲೆಯಲ್ಲಿ ಪೊಲೀಸರು ಮತ್ತು ಮಾರ್ಷಲ್‌ಗಳು ದಾಂಗುಡಿ ಇಟ್ಟಿಿದ್ದರು. ಜನರು ಖರೀದಿ ಮುಗಿಯುತ್ತಿದ್ದಂತ ಮನೆಗೆ ಹೋಗುವಂತೆ ಸೂಚನೆ ಕೊಡುತ್ತಿದ್ದ ರು.

ಇದೇ ರೀತಿ ಶಿವಾಜಿನಗರ, ವಿಮಾನ ನಿಲ್ದಾಾಣ ರಸ್ತೆೆಘಿ, ವಿಜಯನಗರ , ಜಯನಗರ ಸೇರಿದಂತೆ ಬಹುತೇಕ ಕಡೆ ಇಡೀ ನಗರ ಸ್ತಬ್ಧಗೊಂಡಿತ್ತು.್ಲೈಓವರ್‌ಗಳ ಮೇಲೆ ಯಾರೊಬ್ಬರೂ ಸಂಚರಿಸದಂತೆ ಬ್ಯಾಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ ಅವು ಕೂಡ ಖಾಲಿ ಖಾಲಿಯಾಗಿವೆ.

ನಗರಕ್ಕೆೆ ಸಂಪರ್ಕ ಕಲ್ಪಿಿಸುವ ಪ್ರಮುಖ ರಸ್ತೆೆಗಳಾದ ತುಮಕೂರು ರಸ್ತೆೆಘಿ, ಮೈಸೂರು ರಸ್ತೆೆಘಿ, ದೊಡ್ಡಬಳ್ಳಾಾಪುರ, ಹೊಸಕೇಟೆ ಸೇರಿದಂತೆ ನಗರಕ್ಕೆ ಅಷ್ಟ ದಿಗ್ಬಂಧನ ವಿಧಿಸಲಾಗಿದೆ.ಬೆಂಗಳೂರು ನಗರ ಮಾತ್ರವಲ್ಲದೆ ರಾಜ್ಯದ ಇತರೆ ಭಾಗಗಳಲ್ಲೂ ಕೂಡ ಇದೇ ಪರಿಸ್ಥಿಿತಿ ಇದೆ. ಬೆಳಗ್ಗೆೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ನಿನ್ನೆೆಗೆ ಹೋಲಿಸಿದರೆ ಇಂದು ಎಲ್ಲಿಯೂ ಕೂಡ ದೊಡ್ಡ ಪ್ರಮಾಣದಲ್ಲಿ ಜನರು ಗುಂಪುಗೂಡುವ ದೃಶ್ಯಗಳು ಕಂಡು ಬರಲಿಲ್ಲ.

ತರಕಾರಿ, ಹೂವು, ಹಣ್ಣುಘಿ, ಹಂಪಲು, ಮಾಂಸ ಇತ್ಯಾಾದಿ ವಸ್ತುಗಳನ್ನು ಖರೀದಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿಿದ್ದರು. ಅಗತ್ಯ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಬಳಸಬಾರದೆಂಬ ನಿಯಮವನ್ನು ಸಡಿಲಿಕೆ ಮಾಡಿದ್ದರಿಂದ ವಾಹನಗಳಲ್ಲಿ ಬೇಗ ಬೇಗನೇ ಖರೀದಿಸುತ್ತಿಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು

.ಬದಲಾದ ಪೊಲೀಸ್ ವ್ಯವಸ್ಥೆೆಘಿ: ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು , ಮಾಸ್‌ಕ್‌ ಧರಿಸದಿರುವುದು ಹಾಗೂ ಅನಗತ್ಯವಾಗಿ ರಸ್ತೆಗೆ ಬಂದವರು ಮತ್ತು ರೋಡ್ ರೋಮಿಯೋಗಳಿಗೆ ಲಾಠಿ ರುಚಿ ತೋರಿಸಿ ಸಾರ್ವಜನಿಕ ವಲಯದಲ್ಲಿ ವ್ಯಾಾಪಕ ಆಕ್ರೋೋಶಕ್ಕೆೆ ಗುರಿಯಾಗಿದ್ದ ಪೊಲೀಸರ ಶೈಲಿ ಇಂದು ಬದಲಾಗಿತ್ತು.

ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ ನಡೆಸದಂತೆ ಬಸವರಾಜ್ ಬೊಮ್ಮಾಾಯಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಇಂದು ಲಾಠಿ ಏಟು ನಡೆದಿರುವ ಪ್ರಕರಣಗಳು ವರದಿಯಾಗಿಲ್ಲ.

ಪೊಲೀಸರು ಇಂದು ಸಾರ್ವಜನಿಕರ ಜತೆ ವರ್ತಿಸುತ್ತಿಿದ್ದ ದೃಶ್ಯ ಕಂಡು ಬಂತು. ಎಂದಿನಂತೆ ವಾಹನಗಳನ್ನು ಜಪ್ತಿಿ ಮಾಡುವುದು. ದಂಡ ವಿಧಿಸುವುದು, ಮಾಸ್‌ಕ್‌ ಹಾಕದವರಿಗೆ ಶಿಕ್ಷೆೆಘಿ ಹಾಗೂ ಕೆಲವರು ತಿಳಿ ಹೇಳುವ ಕೆಲಸ ಮಾಡುತ್ತಿದ್ದರು. ನಿನ್ನೆಗೆ ಹೋಲಿಸಿದರೆ ಇಂದು ಪರಿಸ್ಥಿತಿ ವಿಭಿನ್ನವಾಗಿತ್ತು.

Facebook Comments

Sri Raghav

Admin