ಶುಕ್ರವಾರ ನೂತನ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.27- ಹೊಸ ನಾಯಕನ ಆಯ್ಕೆ ನಂತರ ಗುರುವಾರ ಅಥವಾ ಶುಕ್ರವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂಭವವಿದೆ. ನಾಳೆ ಶಾಸಕಾಂಗ ಸಭೆ ನಡೆಯಲಿದ್ದು, ಹೊಸ ನಾಯಕನ ಆಯ್ಕೆ ಘೋಷಣೆಯಾದ ನಂತರ ಗುರುವಾರ ಇಲ್ಲವೇ ಶುಕ್ರವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಮುಖ್ಯಮಂತ್ರಿಗೆ ಅಧಿಕಾರ ಗೌಪ್ಯತೆಯನ್ನು ಬೋಧಿಸಲಿದ್ದಾರೆ.

ಶುಕ್ರವಾರ ಶುಭದಿನವಾಗಿರುವುದರಿಂದ ಅಂದೇ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ. ಆಷಾಢ, ಅಶುಭದಿನ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ತಕ್ಷಣವೇ ರಾಜ್ಯಕ್ಕೆ ಹೊಸ ಸಾರಥಿಯನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ.

ಹೆಚ್ಚು ದಿನ ಬಿಟ್ಟಸ್ಟು ಶಾಸಕರು ಬಂಡಾಯ ಏಳಬಹುದೆಂಬ ಹಿನ್ನೆಲೆಯಲ್ಲಿ ತಕ್ಷಣವೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸಬೇಕು ಎಂಬುದು ದೆಹಲಿ ನಾಯಕರ ಲೆಕ್ಕಾಚಾರವಾಗಿದೆ. ಹೀಗಾಗಿ ಬಹುತೇಕ ನಾಳೆ ನೂತನ ಶಾಸಕಾಂಗ ಸಭೆಯ ನಾಯಕನ ಆಯ್ಕೆ ನಡೆಯಲಿದ್ದು, ಗುರುವಾರ ಇಲ್ಲವೇ ಶುಕ್ರವಾರ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

Facebook Comments