ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.14- ಉತ್ತಮ ಕರ್ತವ್ಯ ನಿರ್ವಹಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್ ಅಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ನಕಲಿ ಛಾಪಾ ಕಾಗದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾದ ಎಸ್‍ಜೆ ಪಾರ್ಕ್ ಪೊಲೀಸರ ತಂಡಕ್ಕೆ 50 ಸಾವಿರ ನಗದು ನೀಡಿದರೆ, ಅತ್ಯಾಚಾರಿಯನ್ನು ಬಂಸಿದ ಶ್ರೀರಾಮಪುರ ಪೆÇಲೀಸರ ತಂಡಕ್ಕೆ 1 ಲಕ್ಷ ರೂ. ನಗದು ನೀಡುವ ಮೂಲಕ ಆಯುಕ್ತರು ಪ್ರಶಂಸಿಸಿದ್ದಾರೆ.

ಹಲಸೂರು ಗೇಟ್ ಉಪವಿಭಾಗದ ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‍ಪಿ ರಸ್ತೆಯಲ್ಲಿರುವ ಅಮರ್ ರೇಡಿಯಾ ಅಂಗಡಿ ಬಳಿ ಅ.3ರಂದು ನಿಷೇತಗೊಂಡಿರುವ ಛಾಪಾ ಕಾಗದಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡಲು ಬಂದಿರುತ್ತಾರೆಂಬ ಮಾಹಿತಿ ಬಂದ ಕೂಡಲೇ ಸಿಬ್ಬಂದಿ ಜತೆ ಸ್ಥಳಕ್ಕೆ ಹೋಗಿ ನಾಲ್ವರು ಆರೋಪಿಗಳನ್ನು ಬಂಸಿ ಛಾಪಾ ಕಾಗದಗಳ ಸಮೇತ ವಶಕ್ಕೆ ಪಡೆದುಕೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಸಿದಂತೆ ಉತ್ತಮ ಕರ್ತವ್ಯ ನಿರ್ವಹಿಸಿದ ಅಲಸೂರು ಗೇಟ್ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಖಿ, ಎಸ್‍ಜೆ ಪಾರ್ಕ್ ಇನ್‍ಸ್ಪೆಕ್ಟರ್ ಮಿರ್ಜಾ ಅಲೀ ರಾಜಾ ಮತ್ತು ಸಿಬ್ಬಂದಿಗಳಿಗೆ ಆಯುಕ್ತರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನವಾಗಿ 50 ಸಾವಿರ ರೂ.ಗಳನ್ನು ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಅ.10ರಂದು ರಾತ್ರಿ ರೈಲ್ವೆ ನಿಲ್ದಾಣದ ಬಳಿ ಪೆÇೀಷಕರೊಂದಿಗೆ ಮಲಗಿದ್ದ 4 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಆರೋಪಿಯ ಸುಳಿವು ಅರಿತು ಬಂಸಲು ಹೋದಾಗ ಎಎಸ್‍ಐ ವೆಂಕಟಪ್ಪ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದಾಗ ಶ್ರೀರಾಮಪುರ ಠಾಣೆ ಇನ್‍ಸ್ಪೆಕ್ಟರ್ ಸುನಿಲ್ ಎಸ್.ನಾಯಕ್ ಅವರು ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸೂಚಿಸಿದರೂ ಪೊಲೀಸರ ಮೇಲೆ ಹಲ್ಲೆಯನ್ನು ಮುಂದುವರಿಸಿದಾಗ ಪೊಲೀಸ್ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿನ ಮೊಣಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಸಿದಂತೆ ಉತ್ತಮ ಕರ್ತವ್ಯ ನಿರ್ವಹಿಸಿದ ಅಕಾರಿಗಳಾದ ಇನ್‍ಸ್ಪೆಕ್ಟರ್ ಸುನಿಲ್ ಎಸ್.ನಾಯಕ್, ನಂದಿನಿ ಲೇಔಟ್ ಠಾಣೆ ಇನ್‍ಸ್ಪೆಕ್ಟರ್ ಲೋಹಿತ್ ಬಿ.ಎಂ. ಮತ್ತು ಜಾಲಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಗುರುಪ್ರಸಾದ್ ಎ. ಹಾಗೂ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಹಾಗೂ 1 ಲಕ್ಷ ನಗದು ಬಹುಮಾನ ನೀಡಿ ಆಯುಕ್ತರು ಗೌರವಿಸಿದ್ದಾರೆ.

Facebook Comments

Sri Raghav

Admin