ಕರ್ನಾಟಕದಲ್ಲಿ ಬೃಹನ್ನಾಟಕ ( Live Updates)

ಈ ಸುದ್ದಿಯನ್ನು ಶೇರ್ ಮಾಡಿ

#ಕಲಾಪ ವೀಕ್ಷಣೆಗೆ ರಾಜ್ಯಪಾಲರ ವಿಶೇಷ ಅಧಿಕಾರಿ :
ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿರುವ ಹಿನ್ನಲೆಯಲ್ಲಿ ಕಲಾಪ ವೀಕ್ಷಣೆಗೆ ರಾಜ್ಯಪಾಲರ ವಿಶೇಷ ಅಧಿಕಾರಿಗಳು ಸದನಕ್ಕೆ ಆಗಮಿಸಿದ್ದರು. ನಿನ್ನೆ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್‍ನ್ನು ಭೇಟಿ ಮಾಡಿ ಸದನ ಕಲಾಪದಮಾಹಿತಿ ಪಡೆದಿದ್ದ ರಾಜ್ಯಪಾಲರ ವಿಶೇಷ ಅಧಿಕಾರಿ ರಮೇಶ್ ಕಲಾಪ ವೀಕ್ಷಿಸುತ್ತಿದ್ದಾರೆ. ರಾಜ್ಯಪಾಲರ ಸೂಚನೆ ಮೇರೆಗೆ ಕಲಾಪದಲ್ಲಿ ಭಾಗಿಯಾಗಿರುವ ವಿಶೇಷಾಧಿಕಾರಿ, ಕಲಾಪದ ಸಂಪೂರ್ಣ ಮಾಹಿತಿಯನ್ನು ರಾಜ್ಯಪಾಲರಿಗೆ ರವಾನಿಸಲಿದ್ದಾರೆ.

# ಇವತ್ತೆ ಭ್ರಷ್ಟ ಸರ್ಕಾರಕ್ಕೆ ಕೊನೆ ದಿನವಾಗಲಿದೆ. ಶುಕ್ರವಾರ ಬಿಜೆಪಿಗೆ ಶುಭಕರ ದಿನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾದ ಸುಳ್ಳು ಭರವಸೆಗೆ ಕೊನೆ ದಿನವಾಗುತ್ತೆ. ನಿನ್ನೆ ಮೈತ್ರಿ ಸರ್ಕಾರದ ನಾಯಕರು ವ್ಯವಸ್ಥಿತವಾಗಿಯೇ ಸಿದ್ಧರಾಗಿ ಬಂದು ಕಾಲಹರಣ ಮಾಡಿದ್ದರು. ಈ ವೇಳೆ ಬಿಜೆಪಿಯವರನ್ನು ಕೆರಳಿಸುವ ಯತ್ನ ಮಾಡಿದ್ದಾರೆ ಎಂದು ದೂರಿದರು.

# ತೀವ್ರ ಎದೆನೋವೆಂದು ಮುಂಬೈ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರಿಂದ ಹೇಳಿಕೆ ಪಡೆಯಲು ನಿನ್ನೆ ತಡರಾತ್ರಿ ರಾಜ್ಯ ಪೊಲೀಸರ ತಂಡ ಮುಂಬೈಗೆ ತಲುಪಿದೆ. ಇಂದು ಬೆಳಗ್ಗೆ 9 ಗಂಟೆಗೆ ಮುಂಬೈ ಸೇಂಟ್ ಜಾರ್ಜಸ್ ಆಸ್ಪತ್ರೆಗೆ ತೆರಳಿದ ಡಿಸಿಪಿ ಶಶಿಕುಮಾರ್ ನೇತೃತ್ವದ ಪೊಲೀಸರ ತಂಡ ಇಂದೇ ವಿಚಾರಣೆ ನಡೆಸಲು ಮುಂದಾಗಿದೆ.  ನಮ್ಮ ಪಕ್ಷದ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಗೃಹ ಸಚಿವ ಎಂ.ಬಿ.ಪಾಟೀಲ್‍ಗೆ ಕಿಡ್ನ್ಯಾಪ್ ಆರೋಪ ಸಂಬಂಧ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು.

# ವಿಧಾನಸಭೆಯಲ್ಲೇ ನಿದ್ದೆಮಾಡಿದ ಶಾಸಕರು

# ನಾಳೆ ಮಧ್ಯಾಹ್ನ 1.30 ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೆ ವಿ.ಆರ್.ವಾಲಾ ಪತ್ರ ಬಬರೆದಿದ್ದಾರೆ. ಇದರೊಂದಿಗೆ ಮೈತ್ರಿ ಸರ್ಕಾರಕ್ಕೆ ರಾಜ್ಯಪಾಲರು ಡೆಡ್ ಲೈನ್ ನೀಡಿದ್ದಾರೆ.

# ವಿಧಾನಸಭಾ ಮೊಗಸಾಲೆಯಲ್ಲಿ ರಾತ್ರಿ ಕಳೆಯಲಿರುವ ಬಿಜೆಪಿ ಶಾಸಕರು ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಸಿದರಲ್ಲದೇ ಸ್ಥಳದಲ್ಲೇ ಭೋಜನ ಸ್ವೀಕರಿಸಿದರು. ಯಡಿಯೂರಪ್ಪ ಸೇರಿದಂತೆ ಪಕ್ಷದ 105 ಶಾಸಕರು ಆಹೋರಾತ್ರಿ ಸದನದಲ್ಲೇ ಉಳಿದಿದ್ದಾರೆ.

#  ಸರ್ಕಾರ ಹಾಗೂ ವಿಧಾನಸಭೆಯ ಸ್ಪೀಕರ್ ಉದ್ದೇಶ ಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಕಿಡಿಕಾರಿರುವ ಪ್ರತಿಪಕ್ಷ ಬಿಜೆಪಿ ,ಇಂದೇ ಬಹುಮತ ಸಾಬೀತುಪಡಿಸಬೇಕೆಂದು ಪಟ್ಟುಹಿಡಿದು
ಸದನದಲ್ಲೇ ಪಟ್ಟು ಹಿಡಿದಿದೆ. ಪ್ರತಿಪಕ್ಷ ಬಿಜೆಪಿ ನಾಯಕರು ವಿಶ್ವಾಸ ನಿರ್ಣಯ ಮಂಡಿಸುವವರೆಗೂ ಸದನ ಬಿಟ್ಟು ಕದಲುವುದಿಲ್ಲ ಎಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

# ಹಿಂದೆಂದೂ ಕಾಣದ ರಾಜಕೀಯ ಬೃಹನ್ ನಾಟಕಕ್ಕೆ ಸಾಕ್ಷೀಯಾದ ಕರ್ನಾಟಕ ವಿಧಾನಸಭೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ನಾಟಕೀಯ ನಡೆದು ವಿಶ್ವಾಸ ಮತ ನಿರ್ಣಯದ ಮೇಲೆ ನಡೆದ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.

# ಯಡಿಯೂರಪ್ಪ ಸೇರಿದಂತೆ ಪಕ್ಷದ 105 ಶಾಸಕರು ಆಹೋರಾತ್ರಿ ಸದನದಲ್ಲೇ ಉಳಿದಿದ್ದಾರೆ. ಇನ್ನೊಂದೆಡೆ ಸ್ಪೀಕರ್ ಗೆ ನಿಗದಿತ ಅವಧಿಯಲ್ಲಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟೀಲೇರಲು ಸಜ್ಜಾಗಿದೆ.

# ಸದ್ಯ ಕರ್ನಾಟಕದ ರಾಜಕೀಯ ಪರಿಸ್ಥಿತಿ ಅಯೋಮಯವಾಗಿದ್ದು, ನಾನಾ ಇಲ್ಲವೇ ನೀನಾ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವಾಸ ಮತಯಾಚನೆಗೆ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ವಿಚಾರದಲ್ಲಿ ಸದನದಲ್ಲಿ ಭಾರೀ ಕೋಲಾಹಲ ಏರ್ಪಟ್ಟ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್ ಗೆ ಸಂದೇಶ ರವಾನಿಸಿದ್ದರು.

# ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಕಚೇರಿಯಲ್ಲಿ ಅಡ್ವಕೇಟ್ ಜನರಲ್ ಉದಯ ಹೊಳ್ಳ ಅವರೊಂದಿಗೆ ಸಿದ್ದರಾಮಯ್ಯರ ಪ್ರಸ್ತಾಪಿಸಿದ ವಿಷಯದ ಕುರಿತು ಚರ್ಚಿಸುತ್ತಿದ್ದರು ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿಯವರು ಆಡಳಿತ ಪಕ್ಷದ ಶಾಸಕರ ಪ್ರತಿಭಟನೆಯನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನ ನಡೆಸಿದರು.

# ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅಪಹರಣ : ಪ್ರಕರಣ ದಾಖಲು :
ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಸದನಕ್ಕೆ ಹಾಜರಾಗದೆ ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ಸದನದಲ್ಲಿ ಇಂದು ಸ್ಪೀಕರ್ ಗೆ ದೂರು ನೀಡಿದ್ದ ಹಿನ್ನೆಲೆ ಅಪಹರಣ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ರನ್ನು ಬಿಜೆಪಿಯವರು ಅಪಹರಿಸಿದ್ದಾರೆಂದು ಆರೋಪಿಸಿ ಸದನದಲ್ಲಿ ಕಾಂಗ್ರೆಸ್ ನಾಯಕರು ಹಲವು ಫೋಟೋಗಳನ್ನು ಪ್ರದರ್ಶಿಸಿದ್ದರು. ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಸ್ಪೀಕರ್ ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ದೂರು ದಾಖಲಾಗಿದೆ.

 

Facebook Comments

Sri Raghav

Admin