ಕೆಪಿಎಸ್’ಸಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

 

KPPPPS

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್’ಸಿ)ವು ಗ್ರೂಪ್ ಎ ವೃಂದದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಡಿಪ್ಲೋಮಾ ಕೋರ್ಸ ಇನ್ ಫಾರೆಸ್ಟ್ರಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 24
ಹುದ್ದೆಗಳ ವಿವರ
1.ಬಿಎಸ್ಸಿ (ಅರಣ್ಯ ಶಾಸ್ರ್ತ) ಪದವಿಧರರಿಗೆ – 13 ಹುದ್ದೆಗಳು
2.ಬಿಎಸ್ಸಿ (ಅರಣ್ಯ ಶಾಸ್ರ್ತ) ಪದವಿ ಹೊರತುಪಡಿಸಿ ಇತರೆ ವಿಜ್ಞಾನ / ಇಂಜಿನಿಯರಿಂಗ್ ಪದವಿಧರರಿಗೆ – 11 ಹುದ್ದೆಗಳು
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಅರಣ್ಯ ಶಾಸ್ರ್ತದಲ್ಲಿ ಬಿಎಸ್ಸಿ, ಕ್ರ.ಸಂ2ರ ಹುದ್ದೆಗೆ ಇತರ ವಿಜ್ಞಾನ / ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 30 ವರ್ಷ ನಿಗದಿ ಮಾಡಲಾಗಿದೆ. ಪವರ್ಗ -2ಎ, 2ಬಿ, 3ಎ, 3ಬಿ ವರ್ಗದವರಿಗೆ 33 ವರ್ಷ, ಪ.ಜಾ, ಪ.ಪಂ, ಪವರ್ಗ – 1ರ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಪರೀಕ್ಷಾ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ -2ಎ, 2ಬಿ, 3ಎ, 3ಬಿ ವರ್ಗದವರಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪ.ಜಾ, ಪ.ಪಂ, ಪವರ್ಗ – 1ರ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-10-2018
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 10-10-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.kpsc.kar.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

Facebook Comments

Sri Raghav

Admin