ಬ್ರೇಕಿಂಗ್ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ..! ಇಲ್ಲಿದೆ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.14- ಕೊರೊನಾ ಸೋಂಕಿನ ಆತಂಕದ ನಡುವೆಯೂ ನಡೆದ ಪಿಯುಸಿ ಪರೀಕ್ಷೆಯಲ್ಲಿ ಇಂಗ್ಲೀಷ್‍ನಲ್ಲಿ ಯಾವ ವಿದ್ಯಾರ್ಥಿಯೂ 100ಕ್ಕೆ ನೂರರಷ್ಟು ಅಂಕ ಗಳಿಸಲು ಸಾಧ್ಯವಾಗಿಲ್ಲ.

ಪಿಯುಸಿ ಫಲಿತಾಂಶದಲ್ಲಿ ಪ್ರಕಟಗೊಂಡಿರುವ ಅಂಕಿಅಂಶಗಳ ಪ್ರಕಾರ ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರದಂತಹ ಕಠಿಣ ವಿಷಯಗಳಲ್ಲೂ ನೂರಕ್ಕೆ ನೂರಷ್ಟು ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. ಆದರೆ ಪಿಯುಸಿ ಪರೀಕ್ಷೆ ಎರಡು ಹಂತದಲ್ಲಿ ನಡೆದಿತ್ತು.

ಮೊದಲ ಹಂತದಲ್ಲಿ ಕನ್ನಡ, ಹಿಂದಿ ಭಾಷೆಗಳು ಹಾಗೂ ಐಚ್ಛಿಕ ವಿಷಯಗಳ ಪರೀಕ್ಷೆಗಳು ಮುಗಿದಿದ್ದವು. ಇಂಗ್ಲಿಷ್ ಪರೀಕ್ಷೆ ನಡೆಯಬೇಕೆನ್ನುವಷ್ಟರಲ್ಲಿ ಕೊರೊನಾ ಆತಂಕದಿಂದ ಪರೀಕ್ಷೆ ಮುಂದೂಡಲಾಗಿತ್ತು.

ಕೊನೆಗೆ ಸೋಂಕು ಹೆಚ್ಚಾಗಿದ್ದ ಜೂ.18ರಂದು ಪರೀಕ್ಷೆ ನಡೆದಿತ್ತು. ಆತಂಕದಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು 100ಕ್ಕೆ 100ರಷ್ಟು ಅಂಕ ಗಳಿಸಲು ವಿಫಲರಾಗಿದ್ದಾರೆ.

ಉಳಿದಂತೆ ಕನ್ನಡದಲ್ಲಿ 257, ಹಿಂದಿಯಲ್ಲಿ 51, ಉರ್ದುನಲ್ಲಿ 1, ಸಂಸ್ಕøತದಲ್ಲಿ 967, ಫ್ರೆಂಚ್‍ನಲ್ಲಿ 4, ಐಚ್ಛಿಕ ಕನ್ನಡದಲ್ಲಿ 17, ಇತಿಹಾಸದಲ್ಲಿ 167, ಅರ್ಥಶಾಸ್ತ್ರದಲ್ಲಿ 687, ತರ್ಕಶಾಸ್ತ್ರದಲ್ಲಿ 27, ಭೂಗೋಳಶಾಸ್ತ್ರ 611, ಹಿಂದೂಸ್ತಾನಿ ಸಂಗೀತದಲ್ಲಿ 2, ವ್ಯವಹಾರ ಅಧ್ಯಯನದಲ್ಲಿ 2143, ಸಮಾಜಶಾಸ್ತ್ರದಲ್ಲಿ 10, ರಾಜ್ಯಶಾಸ್ತ್ರದಲ್ಲಿ 159 ಮಂದಿ 100ಕ್ಕೆ 100ರಷ್ಟು ಅಂಕ ಗಳಿಸಿದ್ದಾರೆ.

ಲೆಕ್ಕಶಾಸ್ತ್ರದಲ್ಲಿ 2,305, ಸಂಖ್ಯಾಶಾಸ್ತ್ರದಲ್ಲಿ 1,626 ಮಂದಿ ಮನಶಾಸ್ತ್ರದಲ್ಲಿ 19 , ಭೌತಶಾಸ್ತ್ರದಲ್ಲಿ 946 ಮಂದಿ, ರಸಾಯನಶಾಸ್ತ್ರದಲ್ಲಿ 304 ಮಂದಿ, ಗಣಿತಶಾಸ್ತ್ರದಲ್ಲಿ 7,131 ಮಂದಿ ಜೀವಶಾಸ್ತ್ರದಲ್ಲಿ 800 ಮಂದಿ, ಎಲೆಕ್ಟ್ರಾನಿಕ್ಸ್‍ನಲ್ಲಿ 96, ಗಣಕ ವಿಜ್ಞಾನದಲ್ಲಿ 1072, ಶಿಕ್ಷಣದಲ್ಲಿ 574, ಬೇಸಿಕ್ ಮ್ಯಾಥ್ಸ್‍ನಲ್ಲಿ 964, ಮಾಹಿತಿ ತಂತ್ರಜ್ಞಾನದಲ್ಲಿ 9, ಆಟೊಮೊಬೈಲ್‍ನಲ್ಲಿ 10, ಬ್ಯೂಟಿ ಮತ್ತು ವೆಲ್‍ನೆಸ್‍ನಲ್ಲಿ 1 ನೂರಕ್ಕೆ 100ರಷ್ಟು ಅಂಕ ಗಳಿಸಿದ್ದಾರೆ.

Science 1st Rank

# ವಿಶೇಷ ಚೇತನರ ಸಾಧನೆ:
ವಿಕಲಚೇತನ ವಿದ್ಯಾರ್ಥಿಗಳ ಪೈಕಿ ಸ್ವಲೀನತೆ ಇರುವ 356 ವಿದ್ಯಾರ್ಥಿಗಳ ಪೈಕಿ 219 ಮಂದಿ, ಸೆಲೆಬರಲ್ ಪಾಲ್ಸಿ ಸಮಸ್ಯೆ ಇರುವ 91 ವಿದ್ಯಾರ್ಥಿಗಳ ಪೈಕಿ 53 ಮಂದಿ, ಶ್ರವಣ ದೋಷವಿರುವ 203 ಮಂದಿ ಪೈಕಿ 99 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕಲಿಯುವುದರಲ್ಲಿ ಅಶಕ್ತತತೆ ಇರುವ 161 ಪೈಕಿ 109 ಮಂದಿ, ಲೋಕೋಮೋಟರ್ ಇಂಪೈರ್ಮೆಂಟ್ 351 ಪೈಕಿ 221 ವಿದ್ಯಾರ್ಥಿಗಳು, ಮಂದಬುದ್ದಿ ವಿದ್ಯಾರ್ಥಿಗಳಲ್ಲಿ 55 ಮಂದಿಯಲ್ಲಿ 25 ಮಂದಿ, ಬಹು ಅಂಗವೈಕಲ್ಯ 140 ವಿದ್ಯಾರ್ಥಿಗಳ ಪೈಕಿ 83 ಮಂದಿ, ಮಾತಿನ ದುರ್ಬಲತೆ ಇರುವ 110 ಮಂದಿ ಪೈಕಿ 65 ಮಂದಿ, ದೃಷ್ಟಿ ದುರ್ಬಲತೆ ಇರುವ 310 ಮಂದಿಯಲ್ಲಿ 218 ಮಂದಿ ಪಾಸಾಗಿದ್ದಾರೆ.

ಉನ್ನತಶ್ರೇಣಿ ವಿದ್ಯಾರ್ಥಿಗಳು(ಶೇ.85ಕ್ಕಿಂತ ಹೆಚ್ಚು)-68,866
ಪ್ರಥಮ ದರ್ಜೆ (ಶೇ.85ರಿಂದ ಶೇ.60)-2,21,866
ದ್ವಿತೀಯ ದರ್ಜೆ(ಶೇ.60ರಿಂದ 50)-77,455
ತೃತೀಯ ದರ್ಜೆ(ಶೇ.50ಕ್ಕಿಂತ ಕಡಿಮೆ)-49,110
ಒಟ್ಟು-4,17,297

Facebook Comments

Sri Raghav

Admin