ರಾಜ್ಯದಲ್ಲಿ ಸಂಡೆ ಲಾಕ್‌ಡೌನ್ ರದ್ದು, ಆ.5ರಿಂದ ಜಿಮ್-ಯೋಗ ಶುರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಆರ್ಥಿಕ ಚಟುವಟಿಕೆಗಳಿಕೆಗೆ ಇನ್ನಷ್ಟು ಉತ್ತೇಜನ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಆಗಸ್ಟ್ 2ರಿಂದಲೇ ಜಾರಿಗೆ ಬರುವಂತೆ ಭಾನುವಾರದ ಲಾಕ್ ಡೌನ್ ಅನ್ನು ರದ್ದುಗೊಳಿಸಿದೆ.

ಕೇಂದ್ರದ ಮಾರ್ಗಸೂಚಿ ಪ್ರಕಾರ ಶಾಲಾ ಕಾಲೇಜುಗಳು ಆಗಸ್ಟ್ ಅಂತ್ಯದವರೆಗೆ ತೆರೆಯಲ್ಲ.ಕಂಟೈನ್ ಮೆಂಟ್ ಝೋನ್ ನಲ್ಲಿ ಆಗಸ್ಟ್ 31 ರವರೆಗೂ ಕಠಿಣ ಲಾಕ್ ಡೌನ್ ಮುಂದುವರಿಯಲಿದೆ.

ಕೇಂದ್ರ ಸರ್ಕಾರ ಅನ್ ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದ ಮಾರನೇ ದಿನವೇ ರಾಜ್ಯ ಸರ್ಕಾರ ಸಹ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ರಾಜ್ಯದಲ್ಲಿ ಇನ್ನು ಮುಂದೆ ಬಹುತೇಕ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಪುನರಾಂಭಗೊಳ್ಳಲಿದ್ದು,

ಕಳೆದ ಐದು ತಿಂಗಳಿನಿಂದ ಸ್ತಬ್ದಗೊಂಡಿದ್ದ ವ್ಯಾಪಾರ ವಹಿವಾಟುಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ್ದು, ಆಗಸ್ಟ್ 5ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ಅಲ್ಲದೆ ರಾತ್ರಿ ಕರ್ಫ್ಯೂ ಸಹ ರದ್ದುಗೊಳಿಸಿದೆ.

ಕೋವಿಡ್‌ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆಗಸ್ಟ್‌ 31ರವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅನುಮತಿ ನೀಡಿಲ್ಲ.

ಸದ್ಯಕ್ಕೆ ಮೆಟ್ರೋ ಸಂಚಾರ, ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ಮನರಂಜನಾ ಉದ್ಯಾನವನ, ತೆರೆಯುವುದಕ್ಕೆ ಅನುಮತಿ ನೀಡಲಾಗಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದರ ಮೇಲಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.

ಯೋಗ ಕೇಂದ್ರ, ಜಿಮ್ ತೆರೆಯಲು ಅವಕಾಶ(ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ). ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೊಡಲಾಗಿದೆ.

ವಂದೇ ಭಾರತ್ ಮಿಶನ್ ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಸೀಮಿತ ಅವಕಾಶ(ಕೇಂದ್ರ ಸರ್ಕಾರದ ನಿಯಮಾವಳಿಯಂತೆ) ನೀಡಲಾಗಿದೆ.ಮೆಟ್ರೋ, ಸಿನಿಮಾ ಥಿಯೇಟರ್, ಎಂಟರ್ ಟೈನ್ ಮೆಂಟ್ ಪಾರ್ಕ್, ಬಾರ್, ಪಾರ್ಕ್, ಅಡಿಟೋರಿಯಂ, ಅಸೆಂಬ್ಲಿ ಹಾಲ್ ಸದ್ಯಕ್ಕೆ (ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು) ಯಥಾಸ್ಥಿತಿ ಮುಂದುವರೆಯಲಿದೆ.

ಸಾಮಾಜಿಕ ಮತ್ತು ರಾಜಕೀಯ ಸಮಾವೇಶಗಳಿಗೆ ಅವಕಾಶ ಇಲ್ಲ.ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಬೀದಿ ಬೀದಿಗಳಲ್ಲಿ ಗಣೇಶ ಹಬ್ಬ ಆಚರಣೆ ಇಲ್ಲ .

Facebook Comments

Sri Raghav

Admin