ಕರ್ನಾಟಕ ಬಂದ್ ಎಫೆಕ್ಟ್ ಇಲ್ಲ, ಬಸ್ ಸಂಚಾರ ಯಥಾಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

KSRTC--01

ಬೆಂಗಳೂರು, ಮೇ 28- ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಇಂದು ಬಿಜೆಪಿ ನೀಡಿದ್ದ ಬಂದ್ ಕರೆಯಿಂದ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗಿಲ್ಲ. ಥಾಸ್ಥಿತಿಯಂತೆ ಬಸ್ ಸಂಚಾರ ಎಲ್ಲೆಡೆ ಕಂಡುಬಂದಿತ್ತು. ರಾಜ್ಯಾದ್ಯಂತ ಬಂದ್‍ಗೆ ಕರೆ ನೀಡಿದ್ದರೂ ಎಂದಿನಂತೆ ಬಸ್ ಸಂಚಾರವಿದೆ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ. ಕೆಎಸ್‍ಆರ್‍ಟಿಸಿಯ ಎಲ್ಲ ವಿಭಾಗಗಳ ಹಾಗೂ ಡಿಪೋಗಳಲ್ಲಿ ಎಂದಿನಂತೆ ಬೆಳಗ್ಗೆ 6ರಿಂದ ಬಸ್ ಸಂಚಾರವಿದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ. ಅದೇ ರೀತಿ ಬಿಎಂಟಿಸಿ ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳ ಬಸ್ ಸಂಚಾರದಲ್ಲೂ ಹೆಚ್ಚಿನ ವ್ಯತ್ಯಯವಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Facebook Comments

Sri Raghav

Admin