ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ನೀಡಿದ ಮೊದಲ ಟಾಸ್ಕ್ ಏನು ಗೊತ್ತೇ ….?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20-ನೆರೆ ಪೀಡಿತ ಪ್ರದೇಶಗಳಲ್ಲಿ ನೂತನ ಸಚಿವರು ಬುಧವಾರ-ಗುರುವಾರ ಪ್ರವಾಸ ಕೈಗೊಂಡು ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಸಂಪುಟ ದರ್ಜೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸಕೈಗೊಳ್ಳಲು ಸಚಿವರಿಗೆ ಜಿಲ್ಲಾವಾರು ಉಸ್ತುವಾರಿಯನ್ನು ನೀಡಲಾಗಿದೆ ಎಂದರು.

ಚಾಮರಾಜನಗರ- ವಿ.ಸೋಮಣ್ಣ, ದಕ್ಷಿಣಕನ್ನಡ-ಕೋಟಾ ಶ್ರೀನಿವಾಸಪೂಜಾರಿ, ಬೆಳಗಾವಿ-ಲಕ್ಷ್ಮಣ ಸವದಿ, ಚಿಕ್ಕೋಡಿ-ಶಶಿಕಲಾ ಜೊಲ್ಲೆ, ಬಾಗಲಕೋಟೆ, ವಿಜಯಪುರ-ಕೆ.ಎಸ್.ಈಶ್ವರಪ್ಪ, ಗೋವಿಂದಕಾರಜೋಳ, ಹಾವೇರಿ-ಬಸವರಾಜ ಬೊಮ್ಮಾಯಿ, ಧಾರವಾಡ ಮತ್ತು ಉತ್ತರಕನ್ನಡ- ಜಗದೀಶ್‍ಶೆಟ್ಟರ್, ಗದಗ-ಕೊಪ್ಪಳ-ಸಿ.ಸಿ.ಪಾಟೀಲ್, ಹಾವೇರಿ-ಬಸವರಾಜಬೊಮ್ಮಾಯಿ, ಬಳ್ಳಾರಿ-ರಾಯಚೂರು-ಶ್ರೀರಾಮುಲು, ಯಾದಗಿರಿ-ಪ್ರಭುಚೌಹಾಣ್, ಚಿಕ್ಕಮಗಳೂರು- ಹಾಸನ-ಸಿ.ಟಿ.ರವಿ, ಮಾಧುಸ್ವಾಮಿ, ಕೊಡಗು-ಸುರೇಶ್‍ಕುಮಾರ್, ಮೈಸೂರು-ಆರ್.ಅಶೋಕ್ ಅವರು ಪ್ರವಾಸ ಕೈಗೊಂಡು ನೆರೆ ಸಂತ್ರಸ್ತರ ಪರಿಸ್ಥಿತಿ, ಪರಿಹಾರ ಕಾರ್ಯ ಮೊದಲಾದವುಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನೂತನ ಸಚಿವ ಸುರೇಶ್‍ಕುಮಾರ್ ಉಪಸ್ಥಿತರಿದ್ದರು.ನೆರೆಪೀಡಿತ ಪ್ರದೇಶಗಳಲ್ಲಿ ಸಚಿವರು ಸಮೀಕ್ಷೆ ಕೈಗೊಂಡು ಸಂತ್ರಸ್ತರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯವರ ನಿರ್ದೇಶನದಂತೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತಿದೆ. 5 ಲಕ್ಷ ಪರಿಹಾರ ನೀಡಿದರೂ ತಕ್ಷಣ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ.

ವಾಸ್ತವಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಕಾರ್ಯಕ್ರಮಗಳ ಬಗ್ಗೆತೀರ್ಮಾನ ಮಾಡಲಾಗುವುದು. ಕೇಂದ್ರಸರ್ಕಾರದಮೇಲೆ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರವಾಗಿ ಪರಿಹಾರ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸದ್ಯ ನೂತನ ಸಚಿವರು ನೆರೆಪೀಡಿತ ಪ್ರದೇಶಗಳಿಗೆ ಆದ್ಯತೆ ಮೇಲೆ ಭೇಟಿ ಕೊಟ್ಟು ವರದಿ ನೀಡುತ್ತೇವೆ ಎಂದು ಹೇಳಿದರು.

Facebook Comments