ಹಳೇ ಹಂಪಾಪುರ ಮುಳುಗಡೆ, ಊರು ತೊರೆದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, – ಅಣೆಕಟ್ಟೆ ಗಳಿಂದ ನೀರು ಹರಿಸುತ್ತಿರುವ ಪರಿ ಣಾಮ ಕಾವೇರಿ ನದಿ ಪಾತ್ರದ ಗ್ರಾಮ ಗಳು ಜಲಾವೃತವಾಗುತ್ತಾ ಸಾಗಿದ್ದು, ಇಂದು ಹಳೆ ಹಂಪಾಪುರ ಗ್ರಾಮಕ್ಕೆ ಸಂಪೂರ್ಣ ನೀರು ತುಂಬಿದ್ದು, ಜನರನ್ನು ಕೊಳ್ಳೇಗಾಲ ಪಟ್ಟಣದ ನಿರಾಶ್ರಿತರ ಶಿಬಿರಕ್ಕೆ ವರ್ಗಾಯಿಸಲಾಗಿದೆ.

ನಿನ್ನೆಯಷ್ಟೇ ದಾಸನಾಪುರಗ್ರಾಮ ಮುಳುಗಡೆಯಾಗಿದ್ದರಿಂದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊ ಯ್ಯಲಾಗಿತ್ತು. ನಿನ್ನೆ ಹಳೆಹಂಪಾಪುರ ಸುತ್ತ ನಿಂತಿದ್ದ ನೀರು ರಾತ್ರಿಯಿಂದೀಚೆಗೆ ಗ್ರಾಮದೊಳಕ್ಕೂ ನುಗ್ಗಿದೆ.

ಗ್ರಾಮದ ಮನೆಗಳೆಲ್ಲ ಜಲಾವೃತವಾಗಿ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಮನೆಯ ಇನ್ನಿತರೆ ವಸ್ತುಗಳು ನೀರಿಗೆ ಆಹುತಿಯಾಗಿವೆ. ತೆಪ್ಪದ ಮೂಲಕ ಜನರನ್ನು ಬೇರೆಡೆಗೆ ಸಾಗಿಸಲಾಗಿದೆ.

ಕಬಿನಿ ಹಾಗೂ ಕಾವೇರಿಯಿಂದ ಹೆಚ್ಚು ನೀರು ಹರಿಸಿದ್ದರಿಂದ ನದಿ ತೀರದ ಗ್ರಾಮಗಳು ಸಂಕಷ್ಟಕ್ಕೀಡಾಗಿವೆ. ಸಂಜೆವರೆಗೂ ನೀರು ಹರಿಸುತ್ತಾರೆ ಎನ್ನಲಾಗಿದ್ದು, ವಯನಾಡಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಹೊರ ಹರಿವು ಕಡಿಮೆಯಾಗುವ ಸಾಧ್ಯತೆ ಇದೆ. ಕಬಿನಿಯಿಂದ ನೀರು ನಿಲ್ಲಿಸಲಾಗಿದ್ದು, ಕೆಆರ್‍ಎಸ್‍ನಿಂದ ಕಡಿಮೆ ನೀರು ಹರಿಸಲಾಗುತ್ತಿದೆ. ಹಾಗಾಗಿ ನಾಳೆ ಸಂಜೆವರೆಗೂ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ.

Facebook Comments