ಅತಿವೃಷ್ಟಿ ಪರಿಹಾರಕ್ಕೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21- ಭಾರೀ ಮಳೆಯಿಂದಾಗಿ ರಾಜ್ಯದ ನಾನಾ ಕಡೆ ಅತಿವೃಷ್ಟಿ ಹಾಗೂ ಪ್ರವಾಹ ಉಂಟಾಗಿ ಮನೆ ಮತ್ತು ಗೃಹಪಯೋಗಿ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ಕಳೆದುಕೊಂಡವರಿಗೆ ಹಿಂದಿನ ಮಾರ್ಗಸೂಚಿಯ ಪ್ರಕಾರವೇ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.

ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದ ನಾನಾ ಕಡೆ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಮನೆಗಳ ಪುನರ್ ನಿರ್ಮಾಣ, ದುರಸ್ಥಿ, ಹಾಗೂ ಗೃಹಪಯೋಗಿ ವಸ್ತುಗಳು ಹಾನಿಗೊಳಗಾಗಿದ್ದಾರೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರ ನೀಡಬೇಕೆಂದು ನಿರ್ದೇಶಿಸಲಾಗಿದೆ.

ಎ ವರ್ಗದ ಶೇ.75ಕ್ಕಿಂತ ಮನೆ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ, ಬಿ ವರ್ಗದಲ್ಲಿ ಶೇ.25ರಿಂದ 75ರಷ್ಟು ಭಾಗಶಃ ಮನೆ ಹಾನಿಯಾಗಿದ್ದರೆ ಹೊಸದಾಗಿ ಮನೆ ನಿರ್ಮಿಸಲು 5 ಲಕ್ಷ, ಶೇಕಡಾ 25ರಿಂದ 75ರಷ್ಟು ಭಾಗಶಃ ಮನೆ ಹಾನಿಯಾಗಿದ್ದರೆ ದುರಸ್ತಿ ಕಾರ್ಯಕ್ಕೆ 3 ಲಕ್ಷ ಹಾಗೂ ಶೇ.15ರಿಂದ 25ರಷ್ಟು ಅಲ್ಪಸ್ವಲ್ಪ ಮನೆ ಹಾನಿಯಾಗಿದ್ದರೆ ಸಿ ವರ್ಗದಲ್ಲಿ 50 ಸಾವಿರ ರೂ. ಪರಿಹಾರ ನೀಡಬೇಕೆಂದು ಸೂಚಿಸಿದೆ.

ಕೇಂದ್ರ ಸರ್ಕಾರವು ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿಯಲ್ಲಿ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳು ಹಾನಿಯಾಗಿದ್ದರೆ 3,800 ರೂ. ಪರಿಹಾರ ನೀಡಬೇಕೆಂದು ಸೂಚನೆ ಕೊಟ್ಟಿದೆ. ರಾಜ್ಯ ಸರ್ಕಾರದ ವತಿಯಿಂದ 6200 ರೂ. ಸೇರಿ ಒಟ್ಟು 10 ಸಾವಿರ ಪರಿಹಾರ ನೀಡಬೇಕೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

Facebook Comments