ಐತಿಹಾಸಿಕ ಬೇರ್ ಸಾಹಿಬ್ ಗುರುದ್ವಾರದಲ್ಲಿ ಗುರುನಾನಕ್‍ರಿಗೆ ಪ್ರಧಾನಿ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ಸುಲ್ತಾನ್‍ಪುರ್ ಲೋಧಿ(ಪಂಜಾಬ್), ನ.9-ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಪಂಜಾಬ್‍ನ ಸುಲ್ತಾನ್‍ಪುರ್ ಲೋಧಿಯಲ್ಲಿರುವ ಐತಿಹಾಸಿಕ ಬೇರ್ ಸಾಹಿಬ್ ಗುರುದ್ವಾರ್‍ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗುರುದ್ವಾರಕ್ಕೆ ಆಗಮಿಸಿದ ಮೋದಿ ಅವರನ್ನು ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ(ಎಸ್‍ಜಿಪಿಸಿ) ಮಾಜಿ ಮುಖ್ಯಸ್ಥ ಜಗಜೀರ್ ಕೌರ್ ಸ್ವಾಗತಿಸಿದರು. ಅವರಿಗೆ ಸಮಿತಿ ಪರವಾದಿ ಸಿರೊಪಾ (ಗೌರವ ವಸ್ತ್ರ) ನೀಡಲಾಯಿತು. ಗುರುದ್ವಾರದಲ್ಲಿ ಮೋದಿ 20 ನಿಮಿಷಗಳ ಕಾಲ ಇದ್ದು ಕೀರ್ತನೆಗಳನ್ನು ಆಲಿಸಿದರು.

ಪಂಜಾಬ್ ರಾಜ್ಯಪಾಲ ವಿ.ಪಿ.ಸಿಂಗ್ ಬದ್ನೋರೆ, ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕೇಂದ್ರ ಸಚಿವೆ ಹಸ್ರಿಮತ್ ಕೌರ್ ಬಾದಲ್ ಹಾಜರಿದ್ದರು. ಗುರುನಾನಕ್ ಅವರ 550ನೇ ಜನ್ಮಜಯಂತಿ ಪ್ರಯುಕ್ತ ಐದು ಲಕ್ಷಕ್ಕೂ ಅಧಿ ಸಿಖ್ ಭಕ್ತರು ಗುರುದ್ವಾರ ಬೇರ್ ಸಾಹಿಬ್‍ನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಗುರುನಾನಕ್ ಅವರು ತಮ್ಮ ಯೌವ್ವನ ಆರಂಭದ ದಿನಗಳಲ್ಲಿ ಸುಲ್ತಾನ್‍ಪುರ್ ಲೋಧಿಯಲ್ಲಿ 14 ವರ್ಷ ಇದ್ದರು. ಅವರು ಪ್ರತಿ ದಿನ ಇಲ್ಲಿನ ಕಾಳಿ ಬೇನ್ ನದಿಯಲ್ಲಿ ಸ್ಥಾನ ಮಾಡುತ್ತಿದ್ದರು ಅವರ 550ನೇ ಜನ್ಮ ಜಯಂತಿ ಪ್ರಯುಕ್ತ ಈ ಪ್ರದೇಶದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಎಲ್ಲೆಡೆ ತಳಿರುತೋರಣಗಳು ಮತ್ತು ನಾನಕ್ ದೇವ್ ಅವರ ಚಿತ್ರಗಳು ರಾಜಾಜಿಸುತ್ತಿವೆ.

ಗುರುನಾನಕ್ ಜಯಂತಿ ಪ್ರಯುಕ್ತ ಪಂಜಾಬ್‍ನ ಎಲ್ಲಾ ರಾಜ್ಯಗಳಲ್ಲೂ ಇಂದು ವಿಶೇಷ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸಮಾರಂಭಗಳು ನಡೆದಿವೆ.

Facebook Comments