ಸದ್ಯದಲ್ಲೇ ಎಸ್‍ಪಿ ಹುದ್ದೆಗೆ ಮುಂಬಡ್ತಿ ಪಡೆಯುತ್ತಿದ್ದ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ದೇವೇಂದರ್ ಸಿಂಗ್‍..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ಜ.15-ಭ್ರಷ್ಟಾಚಾರ ಹಾಗೂ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ಡಿವೈಎಸ್ಪಿ ದೇವೇಂದರ್ ಸಿಂಗ್‍ಗೆ ಸದ್ಯದಲ್ಲೇ ಎಸ್‍ಪಿ ಹುದ್ದೆಗೆ ಮುಂಬಡ್ತಿ ಪಡೆಯುತ್ತಿದ್ದ.ಸುಮಾರು 25 ವರ್ಷಗಳ ಕಾಲ ಜಮ್ಮುಕಾಶ್ಮೀರದ ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ದೇವೇಂದರ್ ಸಿಂಗ್‍ಗೆ ಮುಂಬಡ್ತಿ ನೀಡುವ ಕಡತ ಜಮ್ಮುಕಾಶ್ಮೀರದ ಗೃಹ ಇಲಾಖೆಯ ಆಯುಕ್ತರ ಮುಂದಿತ್ತು.

ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಫೆಬ್ರವರಿಯಲ್ಲಿ ಆತ ಎಸ್‍ಪಿಗೆ ಮುಂಬಡ್ತಿ ಪಡೆಯತ್ತಿದ್ದ. ಆದರೆ ತಾನೊಂದು ಬಗೆದರೆ ದೈವ ಮತ್ತೊಂದು ಬಗೆದ ಎಂಬಂತೆ ಜ.11ರಂದು ನಡೆದ ಘಟನೆ ದೇವೇಂದರ್ ಸಿಂಗ್‍ಗೆ ಶ್ರೀಕೃಷ್ಣನ ಜನ್ಮಸ್ಥಳವನ್ನು ತೋರುವಂತೆ ಮಾಡಿತು. ಜ.11ರಂದು ದೇವೇಂದರ್ ಸಿಂಗ್ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಯಿದಿನ್ ಉಗ್ರಗಾಮಿ ಸಂಘಟನೆಯ ಇಬ್ಬರು ಉಗ್ರರ ಜೊತೆ ಮಾರುತಿ ಕಾರಿನಲ್ಲಿ ಹೊರಟಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ.

ಇದೀಗ ಜಮ್ಮುಕಾಶ್ಮೀರದ ಪೊಲೀಸರು ಮತ್ತು ಸೇನೆ ಈತನ ಜನ್ಮವನ್ನೇ ಜಾಲಾಡುತ್ತಿದೆ. ಮೂಲಗಳ ಪ್ರಕಾರ ದೇವೇಂದರ್ ಸಿಂಗ್ ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಕೆಲವು ಉಗ್ರಗಾಮಿ ಸಂಘಟನೆಗಳು ಮತ್ತು ಉಗ್ರರಿಂದ ಹಣ ಪಡೆದಿದ್ದಾನೆ ಎಂಬ ಆರೋಪಗಳು ಕೇಳಿಬಂದಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸಲು ಮುಂದಾಗಿದೆ.ಜ.11ರಂದು ಶ್ರೀನಗರದ ಚೆಕ್‍ ಪೋಸ್ಟ್ ಬಳಿ ಹಿಜ್ಬುಲ್ ಮುಜಾಯಿದ್ದೀನ್ ಕಮಾಂಡರ್ ಸಯ್ಯದ್ ನವೀದ್ ಮುಸ್ತಾಕ್ ಮತ್ತು ಆತನ ಸಹಚರರ ಜೊತೆ ಹೆದ್ದಾರಿಯಲ್ಲಿ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದ. ಕಣಿವೆ ರಾಜ್ಯದಲ್ಲಿ ಉಗ್ರರು ಒಳನುಸುಳಲು ಈತ ಕೆಲವು ಸಂಘಟನೆಗಳ ಜೊತೆ ಕೈ ಜೋಡಿಸಿದ್ದ ಎನ್ನಲಾಗಿದೆ. ಈಗ ಸಿಂಗ್ ಮೇಲೆ ಒಟ್ಟು ಮೂರು ಎಫ್‍ಐಆರ್‍ಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಇದಲ್ಲದೆ ಸಂಸತ್‍ನ ಮೇಲೆ ದಾಳಿ ನಡೆಸಿ ನೇಣುಗಂಬ ಏರಿದ ಅಫ್ಜಲ್‍ಗುರು ಪ್ರಕರಣದಲ್ಲೂ ಸಿಂಗ್ ಹೆಸರು ಕೇಳಿಬಂದಿದೆ. ಆತನನ್ನು ಬಿಡುಗಡೆ ಮಾಡಲು ದೇವೇಂದರ್ ಸಿಂಗ್ ಒಂದು ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ. ನನ್ನ ಬಂಗಾರದ ಒಡವೆಗಳನ್ನು ಮಾರಿ ಹಣ ನೀಡಿದ್ದೆ ಎಂದು ಅಫ್ಜಲ್‍ಗುರು ಪತ್ನಿ ತಬಸಂ ದೂರಿದ್ದರು.

Facebook Comments

Sri Raghav

Admin