ಅಗತ್ಯಬಿದ್ದರೆ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಅಮೆರಿಕಾ ಸಿದ್ಧ : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

ದಾವೋಸ್, ಜ.22- ಕಾಶ್ಮೀರ ವಿವಾದ ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಗತ್ಯಬಿದ್ದರೆ ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ್ ಪುನರುಚ್ಛರಿಸಿದ್ದಾರೆ. ಇದು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷರು ಪ್ರಸ್ತಾಪಿಸಿರುವ 5ನೇ ಮಧ್ಯಸ್ಥಿಕೆ ಪ್ರಸ್ತಾಪವಾಗಿದೆ. ಸ್ವಿಡ್ಜರ್‍ಲೆಂಡ್‍ನ ದಾವೊಸ್‍ನಲ್ಲಿ ನಡೆಯುತ್ತಿರುವ 50ನೇ ವಿಶ್ವ ಆರ್ಥಿಕ ಸಮಾವೇಶದ ಸಂದರ್ಭ ದಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್‍ಖಾನ್ ಜೊತೆ ನಡೆದ ಸಭೆಯಲ್ಲಿ ಅವರು ಈ ಪ್ರಸ್ತಾಪವನ್ನು ಪುನರುಚ್ಚರಿಸಿದರು.

ಕಾಶ್ಮೀರ ವಿವಾದದಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಸಹಾಯ ಮಾಡಲು ಸಾಧ್ಯವಾಗುವುದಾದರೆ ಖಂಡಿತವಾಗಿಯೂ ಮುಂದುವರಿಯಲು ಸಿದ್ಧವಿದೆ. ಎರಡು ದೇಶಗಳ ಮಧ್ಯೆ ನಡೆಯುತ್ತಿರುವ ವಿವಾದಗಳನ್ನು ಅಮೆರಿಕಾ ಬಹಳ ಸೂಕ್ಷ್ಮವಾಗಿ ಹತ್ತಿರದಿಂದ ಗಮನಿಸುತ್ತಿದೆ ಎಂದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರ ವಿವಾದ ದಿಂದ ಪಾಕಿಸ್ತಾನ ಮತ್ತು ಭಾರತ ಮಧ್ಯೆ ಏನು ನಡೆಯುತ್ತಿವೆ ಎಂಬುದರ ಕುರಿತು ನಾವು ಮಾತನಾಡುತ್ತಿದ್ದೇವೆ.

ನಮ್ಮ ಕಡೆಯಿಂದ ಸಹಾಯಹಸ್ತ ಚಾಚಲು ಸಾಧ್ಯವಾಗುವುದಾದರೆ ನಾವು ಖಂಡಿತಾ ಸಿದ್ದರಿದ್ದೇವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೊವನ್ನು ವೈಟ್ ಹೌಸ್ ಟ್ವಿಟ್ರ್ಟ ನಲ್ಲಿ ಅಪ್ ಲೋಡ್ ಮಾಡಿದೆ. ಟ್ರಂಪ್ ಅವರು ಹೀಗೆ ಹೇಳಿದಾಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಲೆಯಾಡಿಸಿ ಅವರ ಮಾತನ್ನು ಒಪ್ಪಿಕೊಂಡ ಸೂಚನೆ ಕಂಡುಬಂತು.

ಕಳೆದ ವರ್ಷ ಆ. 5ರಂದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಉಂಟಾದ ಉದ್ವಿಗ್ನ ಸ್ಥಿತಿಗೆ ಹೀಗೆ ಬಹಿರಂಗವಾಗಿ ಡೊನಾಲ್ಡ ಟ್ರಂಪ್ ಅವರು ಕಾಶ್ಮೀರ ವಿವಾದದಲ್ಲಿ ಅಮೆರಿಕಾ ಸಹಾಯ ಮಾಡಲು ಸಿದ್ದವಿದೆ ಎಂದು ಹೇಳುತ್ತಿರುವುದು ನಾಲ್ಕನೇ ಸಲ. ತೀರಾ ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕೂಡ ಹೇಳಿದ್ದರು.

Facebook Comments