ಕಂಟೇನರ್ ದರ ಏರಿಕೆ, ಸರಕು ಸಾಗಣೆಗಾಗಿ ಸಹಾಯಧನ ನೀಡಲು ಕಾಸಿಯಾ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಕರೋನಾ ನಂತರ ರಫ್ತು ಮತ್ತು ಆಮದುಗಳು ಸುಧಾರಿಸುತ್ತಿರುವ ಸನ್ನಿವೇಶದಲ್ಲಿ ಕಂಟೇನರ್ ದರಗಳು ಅನಿರೀಕ್ಷಿತವಾಗಿ ರೂ. 1.5 ಲಕ್ಷದಿಂದ ಸುಮಾರು 11 ಲಕ್ಷದವರೆಗೆ ಏರಿಕೆಯಾಗಿದ್ದು ಎಂ.ಎಸ್.ಎಂ.ಇ. ವಲಯದ ರಫ್ತುದಾರರಿಗೆ ಮಾರಕವಾಗಿ ಪರಿಣಮಿಸಿದೆ ಹಾಗೂ ಇದು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆದುದರಿಂದ ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ರಾಜ್ಯದ ಎಂ.ಎಸ್.ಎಂ.ಇ. ವಲಯದ ರಫ್ತುದಾರರ ಹಿತಾಸಕ್ತಿಯನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಕಾಸಿಯಾ ಮನವಿ ಮಾಡಿದೆ.

“ಭಾರತ ಸರ್ಕಾರವು ರಫ್ತುದಾರರಿಗೆ ಮತ್ತು ಆಮದುದಾರರಿಗೆ ಸರಕು ಸಾಗಣೆ ಸಹಾಯಧನ ನೀಡುವುದನ್ನು ಪರಿಗಣಿಸಬೇಕು. ಏಕೆಂದರೆ ಸರಬರಾಜುದಾರರು ತಮ್ಮ ಪೂರೈಕೆದಾರರಿಗೆ ಹೆಚ್ಚುವರಿ ವೆಚ್ಚವನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ” ಎಂದು ಕಾಸಿಯಾ ತಿಳಿಸಿದೆ. “ಬೆಲೆಗಳು ಸುಮಾರು ಹತ್ತು ಪಟ್ಟು ಹೆಚ್ಚಾದಾಗ ಯಾವುದೇ ವ್ಯಾಪಾರವು ಉಳಿಯಲು ಕಷ್ಟ ಸಾಧ್ಯವಾಗುವುದು”.

ಇದರೊಂದಿಗೆ ಚೀನಾದ ಬಂದರುಗಳ ಮುಚ್ಚುವಿಕೆಯ ಪ್ರಭಾವದಿಂದ ಅಥವಾ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಕಂಟೇನರ್‌ಗಳ ತೀವ್ರ ಕೊರತೆಯುಂಟಾಗಿದೆ. ಈ ಸಮಯದಲ್ಲಿ ಸರ್ಕಾರ ಮಧ್ಯಪ್ರವೇಶಿಸದಿದ್ದರೆ, ಹೆಚ್ಚಿನ ಸಂಖ್ಯೆಯ ಎಂಎಸ್‌ಎಂಇ ರಫ್ತುದಾರರು ತಮ್ಮ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ.

ವಿಕಾಸದ ಪರಿಸ್ಥಿತಿಗೆ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ದೇಶದ ರಫ್ತು ವ್ಯವಹಾರಗಳನ್ನು ಉಳಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಂತಹ ದೇಶಗಳು ಇತರ ಕ್ರಮಗಳೊಂದಿಗೆ ತನ್ನ ಬಂದರುಗಳನ್ನು 24/7 ತೆರೆಯಲು ನಿರ್ಧರಿಸಿರುವುದರ ಕಡೆಗೆ ಸರ್ಕಾರದ ಗಮನವನ್ನು ಸೆಳೆಯುತ್ತ ರಫ್ತುದಾರರು ಮತ್ತು ಆಮದುದಾರರ ಗಂಭೀರ ಕಾಳಜಿಗಳಿಗೆ ಪ್ರತಿಕ್ರಿಯಿಸಲು ಕಾಸಿಯಾ ಸರ್ಕಾರಕ್ಕೆ ಮನವಿ ಮಾಡಿದೆ. ಇಲ್ಲವಾದಲ್ಲಿ ಜಾಗತಿಕ ಮಟ್ಟದಲ್ಲಿ ಪಾಶ್ಚಿಮಾತ್ಯ ದೇಶದ ಆದೇಶಗಳನ್ನು ಭಾರತ ಕಳೆದುಕೊಳ್ಳುವ ಎಲ್ಲ ರೀತಿಯ ಭೀತಿ ಇದೆ.

Facebook Comments

Sri Raghav

Admin