ಕತ್ರಿನಾ-ವಿಕ್ಕಿ ವಿವಾಹಕ್ಕೆ ಆಪ್ತರಿಗಷ್ಟೇ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಡಿ.5- ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಸಾಲ್ ಮುಂದಿನ ವಾರ ರಾಜಸ್ಥಾನದಲ್ಲಿ ಆಪ್ತರಿಗಷ್ಟೇ ಆಹ್ವಾನವಿರುವ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕತ್ರಿನಾ ಮತ್ತು ವಿಕ್ಕಿ ಡೇಟಿಂಗ್ ಮಾಡುತ್ತಿದ್ದು, ಒಂದು ವರ್ಷದಿಂದ ಅವರ ವಿವಾಹದ ಕುರಿತು ಸುದ್ದಿಗಳು ಸುಳಿದಾಡುತ್ತಿದ್ದವು. ಆದರೆ ಇಬ್ಬರೂ ತಮ್ಮ ಸಂಬಂಧದ ಕುರಿತು ಸಾರ್ವಜನಿಕವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ.

ಮೂಲಗಳ ಪ್ರಕಾರ ರಾಜಸ್ಥಾನದಲ್ಲಿ ಡಿ.7ರಿಂದ 9ರವರೆಗೆ ಸಂಗೀತ್, ಮೆಹಂದಿ ಸೇರಿದಂತೆ ವಿವಾಹದ ವಿವಿಧಾನಗಳ ನೆರವೇರಲಿದೆ.

Facebook Comments