ಮಂದಿರಾ ಬೇಡಿ ಪತಿ ಬಾಲಿವುಡ್ ಖ್ಯಾತ ನಿರ್ದೇಶಕ ಕೌಶಲ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜೂ.30-ಶಾದಿ ಕಾ ಲಡ್ಡು, ಪ್ಯಾರ್ ಮೇ ಕಭೀ ಕಭೀ ಸೇರಿದಂತೆ ಹಲವಾರು ಹಿಂದಿ ಚಿತ್ರಗಳನ್ನು ನಿರ್ಮಿಸಿ ಬಾಲಿವುಡ್‍ನಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಖ್ಯಾತ ನಿರ್ದೇಶಕ ರಾಜ್ ಕೌಶಲ್ ನಿಧನರಾಗಿದ್ದಾರೆ.

ಐವತ್ತು ವರ್ಷದ ಕೌಶಲ್ ಅವರು ಇಂದು ಮುಂಜಾನೆ ಅವರ ನಿವಾಸದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸ್ನೇಹಿತ ಮತ್ತು ನಟ ರೋಹಿತ್ ರಾಯ್ ತಿಳಿಸಿದ್ದಾರೆ.

ಖ್ಯಾತ ನಿರೂಪಕಿ ಮಂದಿರಾ ಬೇಡಿ ಅವರನ್ನು ವಿವಾಹವಾಗಿದ್ದ ಕೌಶಲ್ ಅವರಿಗೆ ವೀರ್ ಹಾಗೂ ತಾರಾ ಎಂಬ ಇಬ್ಬರು ಮಕ್ಕಳಿದ್ದರು. ನಿರ್ದೇಶನ ಅಲ್ಲದೆ ತಮ್ಮದೆ ಬ್ಯಾನರ್‍ನಲ್ಲಿ ಅವರು ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು.

Facebook Comments