ವರುಣನ ಕೃಪೆ, ತಮಿಳುನಾಡಿಗೆ ನಿಗದಿಯಂತೆ ನೀರು, ಕಾವೇರಿ ವಿವಾದ ತಣ್ಣಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.22- ಕಬಿನಿ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದಂತೆ ಕರ್ನಾಟಕಕ್ಕೆ ತಮಿಳು ನಾಡಿಗೆ 25.84 ಟಿಎಂಸಿ ಅಡಿ ಕಾವೇರಿ ನೀರಿನ ಕೊರತೆ ನೀಗಿಸಲು ಕರ್ನಾಟಕಕ್ಕೆ ನೆರವಾಗಿದೆ. ಈ ತಿಂಗಳು ಭಾರೀ ಮಳೆ ಆರಂಭವಾಗುವ ಮುನ್ನವೇ, ಕಬಿನಿ ಮತ್ತು ಕೆಆರ್‍ಎಸ್ ಜಲಾಶಯಗಳಿಗೆ ಸಾಕಷ್ಟು ಒಳಹರಿವು ಇರದ ಕಾರಣ ರಾಜ್ಯದಲ್ಲಿ ನೀರಿನ ಕಠಿಣ ಸ್ಥಿತಿ ಎದುರಿಸುತ್ತಿತ್ತು. ಅ.30ರೊಳಗೆ ಬಿಳಿಗುಂಡ್ಲುವಿನಲ್ಲಿ 14 ಟಿಎಂಸಿ ಅಡಿ ನೀರು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಸಮಿತಿ ರಾಜ್ಯಕ್ಕೆ ಆದೇಶಿಸಿತ್ತು.

ಸುಮಾರು ಒಂದು ವಾರದಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾಶಯದ ಒಳಹರಿವು 14,000 ಕ್ಯೂಸೆಕ್‍ಗಳಿಗೂ ಹೆಚ್ಚಾಗಿದ್ದು ಕೆಆರ್‍ಎಸ್ ಅಣೆಕಟ್ಟು 112 ಟಿಎಂಸಿಯಿಂದ 120 ಟಿಎಂಸಿಗೇರಿದೆ. ಕಬಿನಿ ಜಲಾಶಯದಲ್ಲಿಯೂ ಒಳಹರಿವು 7,000 ಕ್ಯೂಸೆಕ್‍ಗಳಿಗೆ ಏರಿಕೆಯಾದ್ದರಿಂದ ಒಂದು ವಾರದವರೆಗೆ ಅಕಾರಿಗಳು ಪ್ರತಿದಿನ 6,000 ಕ್ಯೂಸೆಕ್‍ಗಳನ್ನು ಬಿಡುಗಡೆ ಮಾಡಿದರು. ಆಗಸ್ಟ್‍ನಲ್ಲಿ, ಸಮಿತಿಯು ಕರ್ನಾಟಕಕ್ಕೆ 32 ಟಿಎಂಸಿಅಡಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಆದೇಶಿಸಿತ್ತು, 10 ದಿನಗಳಲ್ಲಿ ಕೆಆರ್‍ಎಸ್ ಅಣೆಕಟ್ಟಿನ ನೀರಿನ ಮಟ್ಟ 120 ಟಿಎಂಸಿಯಿಂದ 112 ಟಿಎಮ್‍ಸಿಗೆ ಇಳಿದಿದ್ದು, ಸ್ಥಳೀಯ ರೈತರ ಭರವಸೆಯನ್ನು ಬುಡಮೇಲು ಮಾಡಿತು.

ಸಕಾಲಿಕ ಮಳೆಯು ಕೆಆರ್ ಎಸ್ ಮತ್ತು ಕಬಿನಿ ಅಣೆಕಟ್ಟು ಪ್ರದೇಶಗಳ ರೈತರು ಎರಡು ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಕೆಆರ್‍ಎಸ್ ಅಚ್ಚುಕಟ್ಟಿಗೆ ತಿಂಗಳಿಗೆ ಸರಾಸರಿ 6-7 ಟಿಎಮ್ ಸಿ ಅಡಿ ನೀರು ಬೆಳೆಗಳಿಗೆ ಪೂರೈಸಲು ಅಗತ್ಯವಿದೆ.ಮಾರ್ಕೋನಹಳ್ಳಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ 6,000 ಕ್ಯೂಸೆಕ್‍ಗಳಿಗಿಂತ ಹೆಚ್ಚಿನ ನೀರು ಸಂಗ್ರಹವಾಗಿದೆ.

ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯ ಭಾಗಗಳು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂದಿನ ಒಂದೆರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ತಮಿಳುನಾಡಿನ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಮುಂಗಾರು ಮುಗಿಯುತ್ತಿರುವುದರಿಂದ ಕೆಆರ್‍ಎಸ್ ಅಣೆಕಟ್ಟು ತನ್ನ ಸಾಮಥ್ರ್ಯದ ಮಟ್ಟವಾದ 124.8 ಅಡಿಗಳನ್ನು ತಲುಪದಿರಬಹುದು ಎಂದು ನೀರಾವರಿ ಅಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ 14,000 ಕ್ಯೂಸೆಕ್‍ಗಳಷ್ಟು ನೀರು ಅಣೆಕಟ್ಟಿನ ಒಳಹರಿವು 8,097 ಕ್ಯೂಸೆಕ್‍ಗಳಿಗೆ ಇಳಿಕೆಯಾಗಿದೆ ಮತ್ತು ಹೊರಹರಿವು 6,613 ಕ್ಯೂಸೆಕ್ ಆಗಿದೆ. ಅಣೆಕಟ್ಟು ಮಟ್ಟವು 120.05 ಅಡಿಗಳಷ್ಟಿದ್ದು. ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಅವರು 10 ದಿನಗಳ ಕಾಲ ನೀರಾವರಿ ಕಾಲುವೆಗಳ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments