ಪ್ರೇಮಿಗಳ ದಿನಕ್ಕೂ ಕ್ರೇಜಿವಾಲ್ ಸಿಎಂ ಗದ್ದುಗೆಗೂ ಏನಿದು ನಂಟು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.11- ಪ್ರೇಮಿಗಳ ದಿನಾಚರಣೆ ಎಂದರೆ ದೆಹಲಿ ಸಿಎಂ ಕೇಜ್ರಿವಾಲ್‍ಗೆ ಬಲು ವಿಶಿಷ್ಟವಾದ ದಿನ. ಅಂದೇ 3ನೆ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಈ ಹಿಂದೆ 2013, 2015ರಲ್ಲಿ ಆ್ಯಪ್ ಪಕ್ಷ ಗೆದ್ದಾಗ 2 ಬಾರಿ ಸಿಎಂ ಆದಾಗಲೂ ಪ್ರೇಮಿಗಳ ದಿನಾಚರಣೆಯಂದೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಈ ಬಾರಿಯೂ ಪ್ರೇಮಿಗಳ ದಿನಾಚರಣೆಯಂದೇ ಅಧಿಕಾರ ಸ್ವೀಕರಿಸಲು ಕೇಜ್ರಿವಾಲ್ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರೇಮಿಗಳ ದಿನಾಚರಣೆಗೆ ಇನ್ನೆರಡು ದಿನ ಬಾಕಿಯಿದೆ ಎನ್ನುವ ಸಂದರ್ಭದಲ್ಲಿ ದೆಹಲಿ ಮತದಾರರು ಕೇಜ್ರಿವಾಲ್‍ಗೆ ದೊಡ್ಡ ಉಡುಗೊರೆಯನ್ನೇ ನೀಡಿದ್ದಾರೆ. ದೆಹಲಿ ಆಡಳಿತ ಚುಕ್ಕಾಣಿಯನ್ನು 3ನೆ ಬಾರಿಗೆ ಹಿಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಕೇಜ್ರಿವಾಲ್ ಪ್ರೇಮಿಗಳ ದಿನಾಚರಣೆಯಂದೇ 2 ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದರೆ, 2013ರ ವಾಲೆಂಟೆನ್ಸ್ ದಿನದಂದೇ ಅವರು ಅಧಿಕಾರವನ್ನು ಕಳೆದುಕೊಂಡಿದ್ದರು. ಆಗ ಅವರು 49 ದಿನಗಳ ಕಾಲ ಸಿಎಂ ಆಗಿದ್ದರು.

2015ರಲ್ಲಿ ಭಾರೀ ಪ್ರಮಾಣದಲ್ಲಿ ಆ್ಯಪ್ ಗೆದ್ದು ದೆಹಲಿ ಗದ್ದುಗೆ ಹಿಡಿದಾಗಲೂ ರಾಮ್‍ಲೀಲಾ ಮೈದಾನದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು ಕೂಡ ಫೆ.14ರ ಪ್ರೇಮಿಗಳ ದಿನಾಚರಣೆಯಂದೇ. 2018ರ ಪ್ರೇಮಿಗಳ ದಿನಾಚರಣೆಯಂದೇ ಆ್ಯಪ್ ಸರ್ಕಾರಕ್ಕೆ 3 ವರ್ಷಗಳು ತುಂಬಿದರ ಸವಿನೆನಪಿಗಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ತಮಗೂ ಪ್ರೇಮಿಗಳ ದಿನಾಚರಣೆಗೂ ಅವಿನಾಭಾವ ನಂಟಿದೆ ಎಂಬುದನ್ನು ಬಿಂಬಿಸಿದರು.

ಈಗ ಮತ್ತೆ 2020ರ ಪ್ರೇಮಿಗಳ ದಿನದಂದು ಸಿಎಂಗೆ ಗದ್ದುಗೆ ಏರಲು ಕ್ರೇಜಿವಾಲ್ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

Facebook Comments