ನಿಯತ್ತು ಅಂದ್ರೆ ಇದು ಕಣ್ರೀ.. ಕೇವಲ 200ರೂ. ಸಾಲ ಮರುಪಾವತಿಸಲು 22 ವರ್ಷಗಳ ಬಳಿಕ ಭಾರತಕ್ಕೆ ಬಂದ ಕೀನ್ಯಾ ಸಂಸದ..!

ಈ ಸುದ್ದಿಯನ್ನು ಶೇರ್ ಮಾಡಿ

ಔರಂಗಾಬಾದ್, ಜು.12-ಬ್ಯಾಂಕುಗಳಿಂದ ಕೋಟ್ಯಂತರ ರೂ.ಗಳ ಸಾಲ ಪಡೆದು ವಂಚಿಸಿ ವಿದೇಶಗಳಿಗೆ ಹಾರಿ ಭಾರತಕ್ಕೆ ಬರಲು ದೇಶಭ್ರಷ್ಟ ಕಳಂಕಿತ ಉದ್ಯಮಿಗಳು ಹಿಂದೇಟು ಹಾಕುತ್ತಿರುವ ಸನ್ನಿವೇಶದಲ್ಲಿ ಬಡ ರಾಷ್ಟ್ರ ಕೀನ್ಯಾದ ಪ್ರಾಮಾಣಿಕ ಸಂಸದರೊಬ್ಬರ ಸಾಲ ಮರು ಪಾವತಿ ನಿಷ್ಠೆ ಬೆರಗು ಮೂಡಿಸಿದೆ.

30 ವರ್ಷಗಳ ಹಿಂದೆ ಮಹಾರಾಷ್ಟ್ರದ ಔರಂಗಾಬಾದ್‍ನ ವಾಂಖಡೆ ನಗರದ ಮೌಲಾನ ಅಜಾದ್ ಕಾಲೇಜಿನಲ್ಲಿ ಮ್ಯಾನೇಜ್‍ಮೆಂಟ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ರಿಚರ್ಡ್ ನ್ಯಾಗಿರಿ ತೊಂಗಿ ಈಗ ಕೀನ್ಯಾದ ಸಂಸದರು.

1985-89ರಲ್ಲಿ ಇವರು ವ್ಯಾಸಂಗ ಮಾಡುತ್ತ ಪುಟ್ಟ ಕೊಠಡಿಯಲ್ಲಿ ವಾಸವಾಗಿದ್ದರು. ಅವರ ಮನೆ ಸಮೀಪ ದಿನಸಿ ಅಂಗಡಿ ಇತ್ತು. ಅದರ ಮಾಲೀಕ ಕಾಶೀನಾಥ್ ಗೌಳಿ ಅವರು ತೊಂಗಿಗೆ ದಿನಸಿಗಳನ್ನು ಸಾಲದ ರೂಪದಲ್ಲಿ ನೀಡುತ್ತಾ ಅವರ ಊಟೋಪಚಾರಗಳಿಗೆ ನೆರವು ನೀಡುತ್ತಿದ್ದರು. ತೊಂಗಿ ಶಿಕ್ಷಣ ಮುಗಿದ ನಂತರ ಕಿರಾಣಿ ಅಂಗಡಿಗೆ 200ರೂ.ಗಳ ಬಾಕಿ ಪಾವತಿಸಬೇಕಿತ್ತು.

ನಂತರ ಅವರು ಕೀನ್ಯಾಗೆ ತೆರಳಿ ಪ್ರರಿಶ್ರಮ, ಪ್ರತಿಭೆಯಿಂದ ಮೇಲೇರಿ ಮ್ಯಾರಿಬರಿ ಚಾಚೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ತಾವು ಕಿರಾಣಿ ಅಂಗಡಿ ಮಾಲೀಕ ಕಾಶೀನಾಥ್‍ರಿಗೆ 200ರೂ. ಪಾವತಿಸಬೇಕೆಂದು ಗೊತ್ತಿತ್ತು.

30ವರ್ಷಗಳ ಬಳಿಕ ಔರಂಗಾಬಾದ್‍ಗೆ ತಮ್ಮ ಪತ್ನಿ ಮಿಚೆಲ್ ಅವರೊಂದಿಗೆ ಬಂದ ತೊಂಗಿ ವೃದ್ಧ ಕಾಶೀನಾಥರನ್ನು ಭೇಟಿ ಮಾಡಿದ್ದರು. ಕಿರಾಣಿ ಅಂಗಡಿ ಮಾಲೀಕರಿಗೆ ಇವರು ಯಾರು ಎಂಬುದು ಗುರುತು ಪತ್ತೆ ಆಗಲಿಲ್ಲ. ನಂತರ ತೊಂಗಿ ನೀವು ನನ್ನ ವಿದ್ಯಾಭ್ಯಾಸದ ವೇಳೆ ತುಂಬಾ ಸಹಾಯ ಮಾಡಿದ್ದೀರಿ ನಾವು ನಿಮಗೆ 200ರೂ.ಗಳ ಸಾಲ ನೀಡಬೇಕಿತ್ತು. ಅದಕ್ಕಾಗಿ 22ವರ್ಷಗಳ ಬಳಿ ಬಂದಿದ್ದೇನೆಂದು ನೆನಪಿಸಿದರು.

ಈಗ ಕೀನ್ಯಾ ಸಂಸದರಾಗಿ ಗಣ್ಯವ್ಯಕ್ತಿಯಾಗಿರುವ ತೊಂಗಿ ಅವರ ಸಾಧನೆ ಮತ್ತು ಪ್ರಾಮಾಣಿಕತೆಯಿಂದ ಕಾಶೀನಾಥ್ ಭಾವೋದ್ವೇಗಕ್ಕೆ ಒಳಗಾದರೂ ತೊಂಗಿ, ಕಾಶೀನಾಥ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಭೋಜನ ಸೇವೆ ಹಿಂದಿನಿಂದ ನೆನಪಿ ಬುತ್ತಿಯನ್ನು ಬಿಚ್ಚಿಟ್ಟರು.

ನನಗೆ ಸಹಾಯ ಮಾಡಿ ವಿದ್ಯಾಭ್ಯಾಸಕ್ಕೆ ನೆರವಾದ ಕಾಶೀನಾಥ್ ಅವರ ಸಾಲವನ್ನು ಹಿಂದುರುಗಿಸಬೇಕೆಂಬ ಬಯಕೆ ಬಹುದಿನಗಳಿಂದ ನನ್ನ ಕಾಡುತ್ತಿತ್ತು ಈಗ ಅದು ಈಡೇರಿದೆ ಎಂದು ತೊಂಗಿ ಭಾವನಾತ್ಮಕವಾಗಿ ನುಡಿದರು.

ನಂತರ ತಾವು ವ್ಯಾಸಂಗ ಮಾಡಿ ಮೌಲಾನಾ ಅಜಾದ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತೊಂಗಿ ಪ್ರರಿಶ್ರಮ ಮತ್ತು ಪ್ರತಿಭೆ ಎಂದೆಂದಿಗೂ ಬೆಲೆಯಿದೆ ಎಂದು ಮನವರಿಕೆ ಮಾಡಿಕೊಟ್ಟರು.

Facebook Comments

Sri Raghav

Admin