ಕೇರಳದ ಇಬ್ಬರ ಸೆರೆ, 10 ಕೆ.ಜಿ. ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.23- ಕಾರಿನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ ಇಬ್ಬರನ್ನು ಜೆಸಿ ನಗರ ಠಾಣೆ ಪೊಲೀಸರು ಬಂಧಿಸಿ 10 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಆನೇಕಲ್, ಚಂದಾಪುರದ ನಿವಾಸಿ ಸನ್ನದ್ (24) ಮತ್ತು ಎಚ್‍ಎಸ್‍ಆರ್ ಲೇ ಔಟ್ ನಿವಾಸಿ ಮೊಹಮದ್ ಬಿಲಾಲ್ (24) ಬಂಧಿತರು.ಆರೋಪಿಗಳಿಂದ 10 ಕೆ.ಜಿ. ಗಾಂಜಾ, 1 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಗಾಂಜಾವನ್ನು ಆಂಧ್ರಪ್ರದೇಶದ ವಿಶಾಖ ಪಟ್ಟಣಂನ ವ್ಯಕ್ತಿಯೊಬ್ಬರಿಂದ ಸರಕು ಸಾಮಾನುಗಳನ್ನು ಸಾಗಾಟ ಮಾಡುವ ಟ್ರಕ್‍ಗಳಲ್ಲಿ ತರಿಸುತ್ತಿದ್ದುದು ತನಿಖೆಯಿಂದ ತಿಳಿದು ಬಂದಿದೆ. ಜೆಸಿ ನಗರ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆ, ಯುಟಿಸಿ ಕಾಲೇಜು ಬಲಿ ಇವರಿಬ್ಬರು ಗಾಂಜಾ ಮಾರಾಟ ಮಾಡಲು ಬಂದಿದ್ದಾಗ ಖಚಿತ ಮಾಹಿತಿ ಮೇರೆಗೆ ಜೆಸಿ ನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇನ್‍ಸ್ಪೆಕ್ಟರ್ ಡಿ.ಆರ್.ನಾಗರಾಜ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

Facebook Comments