ಸರ್ಕಾರದ ಆದೇಶವನ್ನು ವಿರೋಧಿಸಿ ಕೇರಳಿಗರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.3- ಮಂಗಳೂರು-ಕೇರಳ ನಡುವಿನ ತಲಪಾಡಿ ಗಡಿಯಲ್ಲಿ ಇಂದೂ ಕೂಡ ಕೇರಳದ ಜನರು ಪ್ರತಿಭಟನೆ ನಡೆಸಿದರು. ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಕೇರಳಿಗರು ಕೇರಳ ರಸ್ತೆ ಬಂದ್ ಮಾಡಿ ಇಂದು ರಸ್ತೆಯಲ್ಲೇ ನಿಂತು ಪ್ರತಿಭಟನೆ ನಡೆಸಿದರು.

ಎಡಿಜಿಪಿ ಪ್ರತಾಪ್‍ರೆಡ್ಡಿ ಅವರು ಗಡಿಭಾಗಕ್ಕೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದರು. ಪ್ರತಾಪ್‍ರೆಡ್ಡಿ ಅವರಿಗೆ ದಕ್ಷಿಣ ಕನ್ನಡ ಪೊಲೀಸ್ ಆಯುಕ್ತ ಋಷಿಕೇಶ್ ಸೋನವಾಣಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಸಾಥ್ ನೀಡಿದರು. ಗಡಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ಗಡಿಯಲ್ಲಿ ಯಾವುದೇ ಗೊಂದಲ ಇಲ್ಲ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿಲ್ಲ ಎಂದು ಈ ವೇಳೆ ಪ್ರತಾಪ್‍ರೆಡ್ಡಿ ಅವರು ಸುದ್ದಿಗಾರರಿಗೆ ತಿಳಿಸಿದರು. ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ವಾಪಸ್ ಪಡೆಯಬೇಕೆಂದು ಪ್ರತಾಪ್‍ರೆಡ್ಡಿ ಅವರಿಗೆ ಕೇರಳಿಗರು ಆಗ್ರಹಿಸಿದರು.

Facebook Comments