ಹೊಟೇಲ್‍ನಲ್ಲಿ ಕೇರಳ ವ್ಯಕ್ತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ, ಜೂ.12- ಹೊಟೇಲïನಲ್ಲಿ ಕೆಲಸ ಮಾಡ್ತಿದ್ದ ಕೇರಳ ಮೂಲದ ವ್ಯಕ್ತಿ ಪೆಟ್ರೋಲï ಸುರಿದು, ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಜುಂ (35) ಆತ್ಮಹತ್ಯೆಗೆ ಶರಣಾದ ದುರ್ಧೈವಿ. ಚಾಮರಾಜನಗರ ಬಸ್ ನಿಲ್ದಾಣ ಬಳಿಯ ಮಯೂರ ಲಾq್ಜï ನಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ಎರಡು ತಿಂಗಳಿಂದ ಹೊಟೇಲïನಲ್ಲಿ ಉಳಿದು ಕೊಂಡಿದ್ದನು.

ಮೂಲತಃ ಕೇರಳದ ಮಲಪ್ಪುರಂ ನಿವಾಸಿ ಅಂಜುಂ,ಊರಿಗೆ ಕಳುಹಿಸಿಕೊಡುವಂತೆ ಹಠವಿಡಿದಿದ್ದ ನು. ಲಾಕ್ ಡೌನ್‍ನಿಂದ ಕೇರಳಕ್ಕೆ ಬಸ್ ಸೌಲಭ್ಯವಿಲ್ಲದ ಹಿನ್ನಲೆಯಲ್ಲಿ ಮಾಲಿಕರು ಬಸ್ ಅಥವ ಲಾರಿಯಲ್ಲಿ ಕಳಿಸ್ತೀನಿ ಎಂದು ಭರವಸೆ ನೀಡಿದ್ದರು. ಆದರೆ ರಾತ್ರಿ ಪೆಟ್ರೋಲï ಸುರಿದುಕೊಂಡು ಅಂಜುಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಚಾಮರಾಜ ನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments