ಕೇರಳ ದುರಂತ : ಕಾರ್ಯಾಚರಣೆಗಿಳಿದ 3 ವಿಶೇಷ ಪರಿಹಾರ ವಿಮಾನಗಳು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಕೋಳಿಕೋಡ್, ಆ.8-ಇಬ್ಬರು ಪೈಲೆಟ್‍ಗಳೂ ಸೇರಿದಂತೆ 20 ಮಂದಿ ಬಲಿಯಾದ ಕೇರಳದ ಕೋಳಿಕೋಡ್(ಕಲ್ಲಿಕೋಟೆ) ವಿಮಾನ ದುರಂತದ ನಂತರ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನಯಾನ ಸಂಸ್ಥೆ ಮೂರು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದೆ.

ವಿಮಾನ ದುರಂತದಿಂದ ತೊಂದರೆ ಒಳಗಾದ ಪ್ರಯಾಣಿಕರು ಮತ್ತು ಅವರ ಕುಟುಂಬದವರಿಗೆ ನೆರವಾಗಲು ಕೋಳಿಕೋಡ್‍ನಲ್ಲಿ ಮೂರು ವಿಮಾನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‍ಪ್ರೆಸ್ ಸಂಸ್ಥೆ ತಿಳಿಸಿದೆ.

ಪರಿಹಾರ ಕಾರ್ಯದ ಉಸ್ತುವಾರಿ ವಹಿಸಲು ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್ ಹಾಗೂ ಇಂಡಿಯಾ ಎಕ್ಸ್‍ಪ್ರೆಸ್ ಮುಖ್ಯ ಕಾರ್ಯನಿರ್ವಹಣಾಕಾರಿ (ಸಿಇಒ) ಕೆ. ಶ್ಯಾಮ್ ಸುಂದರ್ ಈಗಾಗಲೇ ಕೋಳಿಕೋಡ್ ತಲುಪಿದ್ದಾರೆ.

ಎಲ್ಲ ಪ್ರಯಾಣಿಕರು ಮತ್ತು ಕುಟುಂಬ ವರ್ಗದವರಿಗೆ ಮಾನವೀಯ ನೆರವು ನೀಡಲು ಮೂರು ವಿಮಾಣಗಳು (ದೆಹಲಿಯಿಂದ ಎರಡು ಮತ್ತು ಮುಂಬೈನಿಂದ ಒಂದು) ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪರಿಣಾಮಕಾರಿ ತುರ್ತು ಸ್ಪಂದನೆಗಾಗಿ ಕ್ಯಾಲಿಕಟ್ (ಕೋಳಿಕೋಡ್), ಮುಂಬೈ, ದೆಹಲಿ, ಮತ್ತು ದುಬೈನ ತನ್ನ ಎಲ್ಲ ಏಜೆನ್ಸಿಗಳೊಂದಿಗೆ ತುರ್ತು ಸ್ಪಂದನೆ ವಿಭಾಗದ ನಿರ್ದೇಶಕರು ಸಮನ್ವಯ ಉಸ್ತುವಾರಿ ವಹಿಸಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‍ಪ್ರೆಸ್ ಹೇಳಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‍ದೀಪ್ ಸಿಂಗ್ ಪುರಿ ಇಂದು ಕೋಟಿಕೋಡ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಎಎಐಬಿ (ವಿಮಾನ ಅವಘಡ ತನಿಖಾ ಮಂಡಳಿ), ಡಿಜಸಿಎ (ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಯ) ಹಾಗೂ ವಿಮಾನ ಸುರಕ್ಷತೆ ಇಲಾಖೆಯ ಉನ್ನತಾಕಾರಿಗಳು ಈಗಾಗಲೇ ದುರಂತದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಕಾರ್ಯಾಚರಣೆಗಳ ಮುಖ್ಯಸ್ಥರು ಮತ್ತು ವಿಮಾನ ಸುರಕ್ಷತಾ ವಿಭಾಗದ ಮುಖ್ಯಸ್ಥರು ಈಗಾಗಲೇ ಕೋಳಿಕೋಡ್‍ನಲ್ಲಿದ್ದು, ಪರಿಸ್ಥಿತಿ ಪರಾಮರ್ಶಿಸುತ್ತಿದ್ದಾರೆ.

Facebook Comments

Sri Raghav

Admin