ತುಮಾಕೂರಲ್ಲಿ  ಇಬ್ಬರು ಕೇರಳ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.4- ಜಿಲ್ಲೆಯಲ್ಲಿ ಮತ್ತೆ ಇಬ್ಬರು ಕೇರಳ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ ಪಟ್ಟಿದ್ದು ಮತ್ತೆ ಕೊರೋನಾ ಆತಂಕ ಹೆಚ್ಚುತ್ತಿದೆ. ಅರುಣಾ ನರ್ಸಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

ಕಳೆದ ಮಂಗಳವಾರವಷ್ಟೆ ಕಾಲೇಜಿನ 15 ಮಂದಿಗೆ ಸೋಂಕು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ಕೊರೋನಾ ತಪಾಸಣೆ ನಿರಂತರವಾಗಿ ನಡೆಸಲಾಗುತ್ತಿದ್ದು , ಇದೀಗ ಮತ್ತೆ ಇಬ್ಬರಿಗೆ ಸೋಂಕು ತಗುಲಿ ಕೊವಿಡ್ ಸೋಂಕಿತ ಕೇರಳ ವಿದ್ಯಾರ್ಥಿಗಳ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.
ಇದಲ್ಲದೆ ವರದರಾಜ್ ನರ್ಸಿಂಗ್ ಕಾಲೇಜಿನಲ್ಲಿ 13 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಉಳಿದಂತೆ ಸಿದ್ದಗಂಗಾ ಕಾಲೇಜಿನಲ್ಲಿ 8 ವಿದ್ಯಾರ್ಥಿಗಳಿಗೆ ಸೋಂಕು ಕಂಡು ಬಂದಿದೆ.

ವರದರಾಜ್ ಕಾಲೇಜಿನ 90 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು ಅದರಲ್ಲಿ, 13 ಮಂದಿಗೆ ಸೋಂಕು ಕಂಡು ಬಂದಿರುವುದರಿಂದ ತಪಾಸಣೆ ತಿವ್ರಗೊಳಿಸಲಾಗಿದೆ. ಪ್ರಸ್ತುತ, ಜಿಲ್ಲಾಯಲ್ಲಿ ಒಟ್ಟಾರೆ 22 ಮಂದಿ ಕೇರಳ ವಿದ್ಯಾರ್ಥಿಗಳಿಗೆ ಕೊರೋನಾ ದೃಢ ಪಟ್ಟಿದ್ದು, ಇವರೊಂದಿಗೆ ಸಂಪರ್ಕ ಹೊಂದಿದವರ ತಪಾಸಣೆಯನ್ನು ನಡೆಸಲಾಗುತ್ತಿದ್ದು, ಎಲ್ಲೆಡೆ ಆತಂಕ ಮನೆಮಾಡಿದೆ.

Facebook Comments