ಕೆಜಿಎಫ್ ಪೊಲೀಸ್‍ರಿಂದ ಭರ್ಜರಿ ಭೇಟೆ, ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್,ಸೆ9-ಡ್ರಗ್ಸ್ ವಾಸನೆ ಕೆಜಿಎಫ್ ನಗರಕ್ಕೂ ಹರಡಿದ್ದು ದಿಡೀರ್ ಕಾರ್ಯಚರಣೆಗೆ ಇಳಿದ ಕೆಜಿಎಫ್ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಇಲಾಕಿಯಾ ಕರುಣಕರನ್ ಆದೇಶದ ಮೇರೆಗೆ ಡಿವ್ಯೆಸ್‍ಪಿ ಉಮೇಶ್ ನೇತೃತ್ವದಲ್ಲಿ ಮಾರಿಕುಪ್ಪಂ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕೃಷ್ಣಗಿರಿ ಲೈನ್‍ನ ಮನೆಯೊಂದರ ಮೇಲೆ ರೈಡ್ ಮಾಡಿದ ಪೊಲೀಸರ ತಂಡ ಮನೆಯಲ್ಲಿ ಅಡಗಿಸಿಡಲಾಗಿದ್ದ ಅಂದಾಜು 1 ಕೋಟಿಗೂ ಅಧಿಕ ಬೆಲೆ ಬಾಳುವ 180 ಕೆಜಿ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ.

ಮನೆಯಲ್ಲಿ ಗಾಂಜವನ್ನು ಶೇಖರಣೆ ಮಾಡಿದ್ದ ಆರೋಪದಡಿಯಲ್ಲಿ ಆರೋಪಿ ಜೋಸೆಫ್ ಮತ್ತು ಸೂರಿ ಎಂಬುವರನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬೆಳಿಗ್ಗೆ 11ರಿಂದ ಪೊಲೀಸರು ಕಾರ್ಯಚರಣೆ ನಡೆಸಿ ಮನೆಯಲ್ಲಿ ಶೇಖರಿಸಡಲಾಗಿದ್ದ ಗಾಂಜವನ್ನು ಸರಿ ಸುಮಾರು 8 ಬ್ಯಾಗ್‍ಗಳಲ್ಲಿ ತುಂಬಿ ಸೀಲ್ ಮಾಡಿ ಮೊಹಜರು ಮಾಡಿದರು.

ರಾಜ್ಯದಲ್ಲಿ ಡ್ರಗ್ಸ್ ಮಾಫೀಯದ ವಿರುದ್ಧ ಪೊಲೀಸ್ ಇಲಾಖೆ ತೊಡೆ ತಟ್ಟಿ ನಿಂತಿದ್ದು ಡ್ರಗ್ಸ್ ಮಾಫೀಯ ಜಾಲದಲ್ಲಿ ಭಾಗಿಯಾಗಿರುವರನ್ನು ಎಡೆ ಮುರಿ ಕಟ್ಟಿ ಬಂದನಕ್ಕೆ ಒಳಪಡಿಸಲಾಗುತ್ತಿದೆ  ಕೆಜಿಎಫ್ ನಗರದಲ್ಲಿ ಕಾಲೇಜು ಯುವಕರಿಗೆ ಹಲವು ವರ್ಷಗಳಿಂದ ನಿರಂತರವಾಗಿ ಗಾಂಜ ಸರಬರಾಜು ಮಾಡಲಾಗುತ್ತಿತ್ತು ಎಂಬುದಕ್ಕೆ ಇಂದು ನಡೆದಿರುವ ದಾಳಿ ಸಾಕ್ಷಿಯಾಗಿದೆ.

ಕೆಜಿಎಫ್ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಗಾಂಜ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಅಂತರಾಜ್ಯಗಳಾದ ಕರ್ನಾಟಕ ಆಂದ್ರಪ್ರದೇಶ,ತಮಿಳುನಾಡು ರಾಜ್ಯಗಳಿಗೆ ಸರಬರಾಜು ಮಾಡಲಾಗುತಿತ್ತು ಎನ್ನಲಾಗುತ್ತಿದೆ .

Facebook Comments