ಜನಾದೇಶವನ್ನು ಗೌರವಿಸುತ್ತೇನೆ : ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಮುನಿಯಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಮೇ 24-ಚುನಾವಣೆಗಳಲ್ಲಿ ಸೋಲು-ಗೆಲುವು ಇರುವುದು ಸಾಮಾನ್ಯ. ಜನಾದೇಶವನ್ನು ನಾನು ಗೌರವಿಸುತ್ತೇನೆ ಎಂದು ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸುವ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ಮತ ಹಾಕುವವರು ಹೆದರಬೇಕಿಲ್ಲ.

ನಮಗೆ ಮತ ಹಾಕಿದವರೊಂದಿಗೆ ನಾನು ಸದಾ ಇರುತ್ತೇನೆ. ಮುಸ್ಲಿಂ ಸಮುದಾಯದವರು ನಮಗೆ ಒಗ್ಗಟ್ಟಾಗಿ ಮತ ಹಾಕಿದ್ದಾರೆ. ಅವರ ಹಿತ ಕಾಪಾಡಲು ನಾನು ಸದಾ ಸಿದ್ಧ ಎಂದರು.

ಜನತೆ ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ. ಮತ ಯಂತ್ರಗಳ ಮೇಲೆ ಅನುಮಾನ ಇದೆ. ಅದರ ತನಿಖೆಗೆ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ ಎಂದು ಹೇಳಿ, ಈಗಾಗಲೇ ದೇಶದ 21 ಪಕ್ಷಗಳು ಇವಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದೆ ಎಂದು ತಿಳಿಸಿದರು.

ಪಕ್ಷದಲ್ಲೇ ಇರುವ ವಿರೋಧಿಗಳ ಬಗ್ಗೆ ಮತ್ತು ಮತ್ತಿತರ ಪ್ರಶ್ನೆಗಳಿಗೆ ಉತ್ತರಿಸದೇ ಈಗ ಉತ್ತರ ಕೊಡುವುದಿಲ್ಲ ಮುಂದೆ ಮಾತನಾಡುತ್ತೇನೆ ಎಂದು ಹೊರಟರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ