ಭಾರತೀಯ ರೈಲ್ವೆಯಲ್ಲಿ ಕಲಾಸಿ ನೌಕರಿಗೆ ತಿಲಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.7-ಭಾರತೀಯ ರೈಲ್ವೆಯಲ್ಲಿ ಜಾರಿಯಲ್ಲಿದ್ದ ವಸಾಹತುಶಾಹಿ ಕಾಲದ ಕಲಾಸಿ ಅಥವಾ ಇಲಾಖೆಯ ಉನ್ನತಾಧಿಕಾರಿಗಳ ನಿವಾಸಗಳ ಕೆಲಸ ಮಾಡುವ ಬಂಗ್ಲೆ ಪರಿಚಾರಕ ನೌಕರಿ ಪದ್ದತಿ ಅಂತ್ಯಗೊಂಡಿದೆ.

ಈ ನೌಕರಿಗೆ ಯಾವುದೇ ಹೊಸ ನೇಮಕಾತಿ ಮಾಡಿಕೊಳ್ಳುವುದನ್ನು ರೈಲ್ವೆ ಮಂಡಳಿ ನಿಷೇಧಿಸಿ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಕಲಾಸಿ ನೌಕರಿ ಪದ್ದತಿಯಿಂದ ಭಾರತೀಯ ರೈಲ್ವೆ ಮುಕ್ತವಾಗಿದೆ. ಟೆಲಿಫೆÇೀನ್ ಅಟೆಂಡೆಂಟ್ ಕಮ್ ಡಾಕ್ ಕಲಾಸಿಗಳ (ಟಿಎಡಿಕೆ) ಹುದ್ದೆಗಳನ್ನೂ ಸಹ ರದ್ದುಗೊಳಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ವಸಾಹತುಶಾಹಿ ಆಳ್ವಿಕೆ ಇದ್ದ ಕಾಲದಿಂದಲೂ ಕಲಾಸಿ ನೌಕರಿ ಪದ್ದತಿ ಜಾರಿಯಲ್ಲಿತ್ತು. ನಂತರ ಬ್ರಿಟಿಷರ ಆಡಳಿತದಲ್ಲೂ ಅದು ಮುಂದುವರಿದು ಭಾರತೀಯ ರೈಲ್ವೆಯಲ್ಲಿ ಈ ಹುದ್ದೆಗಾಗಿಯೇ ನೇಮಕ ಪ್ರಕ್ರಿಯೆ ನಡೆಯುತ್ತಿತ್ತು. ಈಗ ಈ ಪದ್ದತಿಯನ್ನು ನಿಷೇಧಿಸಲಾಗಿದ್ದು, ಇನ್ನು ಮುಂದೆ ಕಲಾಸಿ ನೌಕರಿ ಇರುವುದಿಲ್ಲ.

Facebook Comments