ನಾನೀಗ ಆರೋಗ್ಯವಾಗಿದ್ದೇನೆ, ಪ್ರಾರ್ಥಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದ : ಕಿಚ್ಚ ಸುದೀಪ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.29- ತೀವ್ರ ಆತಂಕ ಮೂಡಿಸಿದ್ದ ವಿಷಯವೀಗ ಹಗುರವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಮ್ಮ ಆರೋಗ್ಯ ಚೇತರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.ತಮಗಾಗಿ ಪ್ರಾರ್ಥಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳಿರುವ ಸುದೀಪ್, ಈಗ ತಮ್ಮ ಆರೋಗ್ಯ ಸುಧಾರಿಸಿದೆ. ಮುಂದಿನ ವಾರದ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ತಮ್ಮ ಆರೋಗ್ಯದ ಕಾಳಜಿ ವಹಿಸಿದ ಡಾ.ವೆಂಕಟೇಶ್, ಡಾ.ವಿನಯ್ ಅವರಿಗೂ ಸುದೀಪ್ ಧನ್ಯವಾದ ಹೇಳಿದ್ದು, ತಮ್ಮ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದ, ಹಾರೈಸಿದ ಹಲವಾರು ವಿಡಿಯೋ ತುಣುಕುಗಳು, ಸಂದೇಶಗಳನ್ನು ನಾನು ನೋಡಿದ್ದೇನೆ. ಎಲ್ಲರಿಗೂ ಧನ್ಯವಾದಗಳು, ಐ ಲವ್ ಯು ಆಲ್ ಎಂದಷ್ಟೇ ಹೇಳಬಲ್ಲೆ ಎಂದು ಸುದೀಪ್ ಟ್ವಿಟ್ ಮಾಡಿದ್ದಾರೆ.

ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ಸುದೀಪ್ ಬಿಗ್ ಬಾಗ್ ವಾರಾಂತ್ಯದ ಸರಣಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಸುದೀಪ್ ಆರೋಗ್ಯಕ್ಕೆ ಏನಾಗಿದೆ ಎಂದು ತಿಳಿಯದೆ ಗೊಂದಲವಾಗಿತ್ತು. ಸುದೀಪ್ ಅವರ ಪತ್ನಿ ಹೇಳಿಕೆಯೊಂದನ್ನು ನೀಡಿ, ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದರು. ಅದರ ಹೊರತಾಗಿ ಏನಾಗಿದೆ, ಹೇಗಿದ್ದಾರೆ ಎಂಬ ಮಾಹಿತಿಯನ್ನು ಗೌಪ್ಯವಾಗಿಡಲಾಗಿತ್ತು.

ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ದ್ರೋಣ ಚಿತ್ರ ಸಿದ್ಧವಾಗಿ, ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಈ ನಡುವೆ ಸುದೀಪ್ ಆರೋಗ್ಯದ ಬಗ್ಗೆ ಭಾರಿ ಆತಂಕ ಎದುರಾಗಿತ್ತು. ಈಗ ಸುದೀಪ್ ಅವರೇ ತಾವು ಆರೋಗ್ಯವಾಗಿ ಇರುವುದಾಗಿ ಹೇಳುವ ಮೂಲಕ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.

Facebook Comments

Sri Raghav

Admin