ವಂಚನೆ ಆರೋಪ : ಕಿಚ್ಚ ಸುದೀಪ್‍ಗೆ ಹೈಕೋರ್ಟ್‌ನಿಂದ ಸಿಕ್ತು ರಿಲೀಫ್..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮಾ.28- ಚಿತ್ರನಟ ಸುದೀಪ್ ವಿರುದ್ಧ ಚಿಕ್ಕಮಗಳೂರಿನ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಚಿಕ್ಕಮಗಳೂರು ತಾಲೂಕು ಮಲ್ಲಂದೂರಿನ ವಾಸಿ ಮಯೂರ್ ಅವರು ಸುದೀಪ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಮೊರೆ ಹೋಗಲಾಗಿತ್ತು.

ನ್ಯಾಯಪೀಠ ವಿಚಾರಣೆ ನಡೆಸಿ, ನ್ಯಾಯಮೂರ್ತಿ ಅರವಿಂದ್‍ಕುಮಾರ್ ಅವರು ಏ.22ಕ್ಕೆ ವಿಚಾರಣೆ ಮುಂದೂಡಿದ್ದಾರೆ.  ಪ್ರಕರಣದ ಹಿನ್ನೆಲೆ: ಕಿಚ್ಚ ಪ್ರೊಡಕ್ಷನ್ ವತಿಯಿಂದ ಸುದೀಪ್ ಅವರು ಖಾಸಗಿ ಚಾನಲ್‍ವೊಂದರಲ್ಲಿ ವಾರಸ್ದಾರ ಎಂಬ ಹೆಸರಿನ ಧಾರಾವಾಹಿ ಚಿತ್ರೀಕರಣಕ್ಕೆ ಮಯೂರ್ ಅವರ ಕಾಫಿತೋಟ ಮತ್ತು ಪುರಾತನ ಮನೆ ಬಳಸಿಕೊಂಡಿದ್ದರು.

ಚಿತ್ರೀಕರಣದ ಸಂದರ್ಭದಲ್ಲಿ ಸ್ಥಿರಾಸ್ತಿಗೆ ನಷ್ಟ ಉಂಟು ಮಾಡಿ ಬಾಡಿಗೆಯನ್ನೂ ಪಾವತಿಸದೆ ಇರುವ ಬಗ್ಗೆ ದೂರು ನೀಡಿದ್ದರು.  ಈ ಕುರಿತಂತೆ ಚಿಕ್ಕಮಗಳೂರಿನ ಎರಡನೆ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಗೆ ನಟ ಸುದೀಪ್ ಗೈರು ಹಾಜರಾಗಿದ್ದರು.

ನ್ಯಾಯಾಲಯಕ್ಕೆ ಗೈರು ಹಾಜರಾದ ಕಾರಣ ಸುದೀಪ್ ವಿರುದ್ಧ ಜಾಮೀನು ರಹಿತ ವಾರೆಂಟ್‍ಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸುದೀಪ್ ಹೈಕೋರ್ಟ್ ಮೊರೆ ಹೋಗಿದ್ದರು.

Facebook Comments

Sri Raghav

Admin