ಆನ್‍ಲೈನ್ ಕ್ಲಾಸ್‍ನಲ್ಲಿ ಪಾಠ ಕೇಳುತ್ತಿದ್ದ ಬಾಲಕ ನಿಗೂಢ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ದೊಡ್ಡಬಳ್ಳಾಪುರ, ಆ.29- ಆನ್‍ಲೈನ್ ಕ್ಲಾಸ್‍ನಲ್ಲಿ ಪಾಠ ಕೇಳುತ್ತಿದ್ದ ಬಾಲಕ ನಿಗೂಢ ರೀತಿಯಲ್ಲಿ ಜೋಗುಳದ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.  ದೊಡ್ಡಬಳ್ಳಾಪುರ ತಾಲೂಕಿನ ಹೊರ ವಲಯ ದರ್ಗಾ ಜೋಗಹಳ್ಳಿಯಲ್ಲಿ ಘಟನೆ ನಡೆದಿದ್ದು, ಮಂಜುನಾಥ್ ಎಂಬುವರು ಮಗ ವಿಶ್ವಾಸ್ (10) ಸಂಶಯಸ್ಪದವಾಗಿ ಸಾವನ್ನಪ್ಪಿದ್ದಾನೆ.

ಜ್ಞಾನಗಂಗಾ ವಿದ್ಯಾಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿ ಮೃತ ವಿಶ್ವಾಸ್, ಕೊರೊನಾ ಹಿನ್ನಲೆ ಆನ್‍ಲೈನ್ ಕ್ಲಾಸ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ನಿನ್ನೆ ಮಧ್ಯಾಹ್ನ 3 ಗಂಟೆಗೆ ಆನ್ ಲೈನ್ ಕ್ಲಾಸ್ ಇದ್ದ ಕಾರಣಕ್ಕೆ ಆತನ ಪೋಷಕರು ರೂಮ್ ಒಳಗೆ ಕಳುಹಿಸಿದ್ದಾರೆ.

ಮನೆಯಲ್ಲಿ ಸಣ್ಣ ಮಗುವಿದ್ದ ಕಾರಣಕ್ಕೆ ರೂಮ್‍ನಲ್ಲಿ ಜೋಕಾಲಿ ಕಟ್ಟಲಾಗಿತು. ಆನ್‍ಲೈನ್‍ಕ್ಲಾಸ್ ಗೆ ರೂಮ್ ಒಳ ಹೋದ ವಿಶ್ವಾಸ್ ಜೋಕಾಲಿ ಒಳಗೆ ಕುಳಿತು ಪಾಠ ಕೇಳುತ್ತಿದ್ದ.

ಆನ್‍ಲೈನ್ ಕ್ಲಾಸ್‍ನಿಂದ ಹೊರಗೆ ಬರದಿದ್ದರಿಂದ ರೂಮ್ ಒಳ ಹೋಗಿಪೊಷಕರು ನೋಡಿದಾಗ ಆಗ ಅವರ ಕಣ್ಣಿಗೆ ಕಂಡಿದ್ದು ಜೋಕಾಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದ ವಿಶ್ವಾಸ್ ಮೃತ ದೇಹ.

ವಿಶ್ವಾಸ್ ಸಾವಿನ ಬಗ್ಗೆ ಸಂಶಯವಿದ್ದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರ ನಿರ್ಲಕ್ಷ್ಯತೆಯಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Facebook Comments

Sri Raghav

Admin