ಎಸ್‍ಎಂಐಬಿ ಪಂದ್ಯಾವಳಿ : 2ನೇ ಸುತ್ತು ಪ್ರವೇಶಿಸಿದ ಶ್ರೀಕಾಂತ್..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ನ.27-ಸೈಯದ್ ಮೋದಿ ಇಂಟರ್‍ನ್ಯಾಷನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತೀಯ ಆಟಗಾರರ ಪ್ರಾಬಲ್ಯ ಮುಂದುವರಿದಿದೆ. ಮೂರನೇ ಶ್ರೇಯಾಂಕ ಕೆ.ಶ್ರೀಕಾಂತ್ ರಷ್ಯಾದ ವ್ಲಾಡಿಮಿರ್ ಮಲ್ಕೋವ್‍ರನ್ನು ನೇರ ಸೆಟ್‍ಗಳಿಂದ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಆರಂಭಿಕ ಸುತ್ತಿನ 36 ನಿಮಿಷಗಳ ಹಣಾಹಣಿಯಲ್ಲಿ ಶ್ರೀಕಾಂತ್ 21-12, 21-11 ಸೆಟ್‍ಗಳಿಂದ ಮಿಲ್ಕೋವ್‍ರನ್ನು ಪರಾಭವಗೊಳಿಸಿದರು. ಎರಡನೇ ಸುತ್ತಿನಲ್ಲಿ ಶ್ರೀಕಾಂತ್ ಭಾರತದವರೇ ಆದ ಪಿ.ಕಶ್ಯಪ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಕಶ್ಯಪ್, ಫ್ರೆಂಚ್‍ನ ಲುಕಾಸ್ ಕೋರ್ವಿ ಅನುಪ ಸ್ಥಿತಿಯಿಂದ ವಾಕ್‍ಓವರ್ ಮುನ್ನಡೆ ಪಡೆದರು.

ಭಾರತೀಯರಲ್ಲಿ, ಕಳೆದ ವಾರ ಸ್ಕಾಟಿಷ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡ 18 ವರ್ಷದ ಲಕ್ಷ್ಯ ಸೇನ್ ಸಹ ಮುಂದಿನ ಹಂತ ಪ್ರವೇಶಿಸಿದ್ದಾರೆ. ಮತ್ತೊಬ್ಬ ಫ್ರೆಂಚ್ ಆಟಗಾರ ಥಾಮಸ್ ರೌಕ್ಸೆಲ್ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಕಾರಣ ವಾಕ್ ಓವರ್ ಅವಕಾಶ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಅಶ್ಮಿತಾ ಚಾಲಿಹಾ, ಭಾರತೀಯರೇ ಆದ ವೃಶಾಲಿ ಗುಮ್ಮಡಿ ಅವರನ್ನು 21-16, 21-16 ಸೆಟ್‍ಗಳಿಂದ ವಿಜೇತರಾಗಿ ಮುಂದಿನ ಹಂತ ಪ್ರವೇಶಿಸಿದ್ದಾರೆ.

Facebook Comments