ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿದರೆ ಕಿಡ್ನಿ ಸ್ಟೋನ್ ಆಗೋದು ಗ್ಯಾರಂಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮನುಷ್ಯನ ಶರೀರದಲ್ಲಿ ಮೂತ್ರಪಿಂಡಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇವು ರಕ್ತವನ್ನು ಹಾಳುವ ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ, ಮೂತ್ರದ ಮೂಲಕ ಹೊರ ಹಾಕಿ ಲವಣಗಳ ಸಮತೋಲನವನ್ನು ಕಾಪಾಡುತ್ತವೆ.

ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಫಟಿಕ ರೂಪದಲ್ಲಿ ಮಾರ್ಪಟ್ಟು ಘನ ವಸ್ತುವಾಗಿ ಪರಿವರ್ತನೆಯಾಗುತ್ತವೆಯೋ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿ ಸ್ಟೋನ್ ಎಂದು ಕರೆಯಲಾಗುತ್ತದೆ.

ಈ ಸಮಸ್ಯೆ ಇರುವವರು ಆಹಾರ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಟೊಮ್ಯಾಟೊ, ಬದನೆಕಾಯಿ, ಸೀಬೆಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸಹ ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬರುತ್ತದೆ.

ಕಿಡ್ನಿ ಸ್ಟೋನ್ ಸಮಸ್ಯೆ ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಈ ಸಮಸ್ಯೆಗೆ ಸಾಕಷ್ಟು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದೂ ಸಹ ಈ ಸಮಸ್ಯೆಗೆ ಮುಖ್ಯ ಕಾರಣ. ಅಲ್ಲದೆ, ಬೀಜಗಳಿರುವ ಆಹಾರಗಳ ಸೇವನೆಯಿಂದಲೂ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುತ್ತದೆ. ಕಿಡ್ನಿಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು.

ಬೀಜಗಳಿರುವ ಟೊಮ್ಯಾಟೋ, ಸೀಬೆಹಣ್ಣು, ದಾಳಿಂಬೆ, ಬದನೇಕಾಯಿ ಮೊದಲಾದವುಗಳ ಸೇವಿಸಬಾರದು. ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎಂದರೆ ಕಡಿಮೆ ನೀರು ಕುಡಿಯುವುದು. ಆದರೆ, ನಿಮ್ಮ ದೇಹದಲ್ಲಿ 5 ಮಿಮೀ ನಷ್ಟು ಕಲ್ಲು ಇದ್ದರೆ, ಅದನ್ನು ಶಸ್ತ್ರಚಿಕಿತ್ಸೆಯಿಂದ ಮಾತ್ರ ತೆಗೆಯಲು ಸಾಧ್ಯ.

ಆದರೆ ನಿಮ್ಮ ದೇಹದಲ್ಲಿ ಸಣ್ಣ ಕಲ್ಲು ಇದ್ದರೆ, ಅದನ್ನು ತೊಡೆದುಹಾಕಲು ಔಷಧಿಗಳನ್ನು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದೂ ಅಷ್ಟೇ ಅಗತ್ಯ. ಮೂತ್ರಪಿಂಡ, ಪಿತ್ತಕೋಶ ಮತ್ತು ಮೂತ್ರದ ಕೊಳವೆಗಳಲ್ಲಿ ಕಲ್ಲಿನ ಸಮಸ್ಯೆ ಇರಬಹುದು. ಈ ಸಮಸ್ಯೆ ಎದುರಾದರೆ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವು ಸೇವಿಸುವ ಪ್ರತಿಯೊಂದು ಆಹಾರವೂ ಪೌಷ್ಟಿಕವಾಗಿದ್ದು, ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಿ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ