ಬಾಳೆದಿಂಡಿನಲ್ಲಿದೆ ಕಿಡ್ನಿ ಸ್ಟೋನ್‌ಗೆ ಪರಿಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಲ್ಲಿ ಕಿಡ್ನಿ ಸ್ಟೋನ್​ ಸಾಮಾನ್ಯವಾದ ಸಮಸ್ಯೆಯಾಗಿದೆ. ಯಾಕಂದ್ರೆ ಚಿಕ್ಕ ಮಯಸ್ಸಿನ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ  ಈ ಸಮಸ್ಯೆ ಕಾಡುತ್ತದೆ. ನೀರಿನ ಕೊರತೆ, ಸೋಡಿಯಂ ಪ್ರಮಾಣದಲ್ಲಿ ಹೆಚ್ಚಳ, ಡಯಾಬಿಟೀಸ್, ರಕ್ತದೊತ್ತಡ ಮತ್ತು ಅನುವಂಶಿಕತೆಯಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಸಾಧ್ಯತೆಗಳಿವೆ.

ಕಿಡ್ನಿಯಲ್ಲಿ ಸ್ಟೋನ್​ ಉಂಟಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ.?  ಕೆಳಹೊಟ್ಟೆಯಲ್ಲಿ ಅಸಾಧ್ಯ ನೋವು, ಪಕ್ಕೆಲುಬು, ಬೆನ್ನಿನಲ್ಲಿ ನೋವು, ವಾಂತಿಯ ಜತೆ ನೋವು, ಬೇಗ ಸುಸ್ತಾಗುವುದು, ಮೂತ್ರವಿಸರ್ಜನೆ ವೇಳೆ ನೋವು, ಮೂತ್ರದಲ್ಲಿ ರಕ್ತ, ವಾಸನೆಯುಕ್ತ ಮೂತ್ರ, ಉರಿಮೂತ್ರ, ಜ್ವರ-ಶೀತ ಮತ್ತು ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕು ಎನಿಸುವುದು ಕಿಡ್ನಿಯಲ್ಲಿ ಕಲ್ಲು ಉಂಟಾಗಿರುವ ಲಕ್ಷಣಗಳು.

ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಪಾರಾಗಬಹುದು. ದಿನನಿತ್ಯ ಹೆಚ್ಚು ನೀರು ಕುಡಿಯುವುದು, ನೀರಿನ ಅಂಶ ಹೆಚ್ಚಿರುವ ಆಹಾರ, ಸೋಡಿಯಂ ಪದಾರ್ಥಗಳ ಸೇವನೆ ಕಡಿಮೆ ಮಾಡುವುದರಿಂದ ಈ ಕಿಡ್ನಿ ಸ್ಟೋನ್​ ಸಮಸ್ಯೆಯಿಂದ ಪಾರಾಗಬಹುದು.

# ಬಾಳೆದಿಂಡಿನ ಪಲ್ಯ >  ಬೇಕಾಗುವ ಪದಾರ್ಥಗಳು: ಬಾಳೆದಿಂಡು – 1(1 ಮೊಳ ಉದ್ದ),,  ಕಡಲೇಬೇಳೆ- 2 ಚಮಚ,  ತುರಿದ ತೆಂಗಿನಕಾಯಿ – 1 ಬಟ್ಟಲು,  ಹಸಿಮೆಣಸಿನ ಕಾಯಿ – 2
ಒಣಮೆಣಸಿನ ಕಾಯಿ – 2,  ಬೆಲ್ಲ – ಸ್ವಲ್ಪ,  ಹುಣಸೆಹಣ್ಣಿನ ರಸ,  ಉಪ್ಪು – ರುಚಿಗೆ, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: ಕುಕ್ಕರ್ ಗೆ ಎಣ್ಣೆ, ಒಣಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ನಂತರ ಹೆಚ್ಚಿಟ್ಟ ಬಾಳೆದಿಂಡು ಹಾಕಿ 2 ಕೂಗು ಕೂಗಿಸಿಕೊಳ್ಳಬೇಕು. ಇದನ್ನು ಇಳಿಸಿಕೊಂಡು ಆರಿಸಿಟ್ಟುಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಹಾಕಿ ರುಬ್ಬಿಕೊಳ್ಳಬೇಕು.

ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ, ಉಪ್ಪು, ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಪ್ಯಾನ್ ನಲ್ಲಿ ಹುರಿಯಬೇಕು. ಕೊತ್ತಂಬರಿ ಸೊಪ್ಪು ಹಾಕಿ ಗಾರ್ನಿಶ್ ಮಾಡಿದರೆ ರುಚಿಯಾದ ಹೆಲ್ದಿಯಾದ ಬಾಳೆದಿಂಡಿನ ಪಲ್ಯ ರೆಡಿ.

Facebook Comments