ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮತಾಂತರ ; ಡಿ ಗ್ರೂಪ್ ನೌಕರ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.28- ಆಸ್ಪತ್ರೆಗೆ ಬರುವ ರೋಗಿಗಳನ್ನು ಮತಾಂತರವಾಗುವಂತೆ ಪ್ರಚೋದನೆ ಮಾಡುತ್ತಿದ್ದ ಡಿ ಗ್ರೂಪ್ ನೌಕರ ಮಂಜುನಾಥ್‍ನನ್ನು ಎತ್ತಂಗಡಿ ಮಾಡಲಾಗಿದೆ. ರೋಗಿಯೊಬ್ಬರ ಸಂಬಂಧಿ ಪ್ರಸನ್ನ ಎಂಬುವವರು ಹಿಂದೂಪರ ಸಂಘಟನೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಘಟನೆಯವರು ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿದಾಗ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿರುವುದು ಕಂಡುಬಂದಿದೆ. ಬಳಿಕ ಕಿದ್ವಾಯಿ ನಿರ್ದೇಶಕ ರಾಮಚಂದ್ರ ಅವರಿಗೆ ಹಿಂದೂಪರ ಸಂಘಟನೆಯವರು ದೂರು ನೀಡಿದ್ದಾರೆ.

ದೂರಿನ ಬಳಿಕ ಪರಿಶೀಲನೆ ನಡೆಸಿದಾಗ ಮತಾಂತರಕ್ಕೆ ಯತ್ನಿಸಿದ್ದು ಸಾಬೀತಾಗಿದೆ. ಹೀಗಾಗಿ ಡಿ ಗ್ರೂಪ್ ನೌಕರ ಮಂಜುನಾಥ್‍ನನ್ನು ಕಲಬುರಗಿ ಕಿದ್ವಾಯಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಯೇಸುವಿನ ಪುಸ್ತಕ ನೀಡಿ ಮಂಜುನಾಥ್ ಮತಾಂತರಕ್ಕೆ ಯತ್ನಿಸುತ್ತಿದ್ದ. ಈತ ಕೂಡ ಮತಾಂತರ ಆಗಿದ್ದಾರೆ ಎನ್ನಲಾಗುತ್ತಿದೆ.

ಹಿಂದೂ ಧರ್ಮದಲ್ಲಿ ಇದ್ದರೆ ಏನೂ ಆಗುವುದಿಲ್ಲ, ಕ್ರೈಸ್ತ ಧರ್ಮಕ್ಕೆ ಬನ್ನಿ. ಯೇಸು ಒಬ್ಬನೇ ದೇವರು. ಯೇಸುವಿನಿಂದ ಮಾತ್ರ ನಿಮ್ಮನ್ನ ಕಾಪಾಡಲು ಸಾಧ್ಯ ಎಂದು ಪ್ರಚೋದನೆ ನೀಡುತ್ತಿದ್ದ. ಅಲ್ಲದೆ, ಕ್ರೈಸ್ತ ಧರ್ಮಕ್ಕೆ ಬಂದರೆ ನಿಮ್ಮ ಅನಾರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಮಂಜುನಾಥ್ ಹೇಳುತ್ತಿದ್ದ. ಇದರಿಂದ ಬೇಸತ್ತಿದ್ದ ರೋಗಿಯ ಸಂಬಂ ಪ್ರಸನ್ನ ಹಿಂದೂ ಸಂಘಟನೆ ಮುಖಂಡರಿಗೆ ಮಾಹಿತಿ ನೀಡಿದ್ದಾರೆ.

Facebook Comments