ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ ಪೋಲಾರ್ಡ್

ಈ ಸುದ್ದಿಯನ್ನು ಶೇರ್ ಮಾಡಿ

ಆ್ಯಂಟಿಗುವಾ, ಮಾ.4- ಇಂದಿಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಚುಟುಕು ಪಂದ್ಯದಲ್ಲಿ ಕೆರಿಬಿಯನ್‍ನ ದೈತ್ಯ, ಸ್ಪೋಟಕ ಆಟಗಾರ ಕಿರಾನ್ ಪೋಲಾರ್ಡ್ ಅವರು ಲಂಕಾದ ಧನಂಜಯರ 6ನೇ ಓವರ್‍ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಲ್ಲದೆ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಈ ರೀತಿ ಒಂದೇ ಓವರ್‍ನಲ್ಲಿ 6 ಸಿಕ್ಸರ್ ಸಿಡಿಸಿದ 3ನೆ ಬ್ಯಾಟ್ಸ್‍ಮನ್ ಆಗಿ ಪೋಲಾರ್ಡ್ ಗುರುತಿಸಿಕೊಂಡಿದ್ದಾರೆ.

ಪೋಲಾರ್ಡ್‍ಗೂ ಮುನ್ನ 2007ರ ಚೊಚ್ಚಲ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತದ ಸಿಕ್ಸರ್‍ಗಳ ಸರದಾರ ಯುವರಾಜ್‍ಸಿಂಗ್ ಅವರು ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್‍ರ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿದ್ದರೆ, ಏಕದಿನ ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಹರ್ಷಲ್‍ಗಿಬ್ಸ್ ಅವರು ನೆದರ್‍ಲ್ಯಾಂಡ್ ವಿರುದ್ಧ ಒಂದೇ ಓವರ್‍ನಲ್ಲಿ 6 ಸಿಕ್ಸರ್‍ಗಳನ್ನು ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.

# ವೆಸ್ಟ್ ಇಂಡೀಸ್‍ಗೆ ಗೆಲುವು:
ಟಾಸ್ ಗೆದ್ದು ಮೊದಲು ಅತಿಥೇಯರಿಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ ವಿಂಡೀಸ್ ಲಂಕಾವನ್ನು 20 ಓವರ್‍ಗಳಲ್ಲಿ 131 ರನ್‍ಗಳಿಗೆ ಸೀಮಿತಗೊಳಿಸಿತು. ಲಂಕಾದ ಪರ ವಿಕೆಟ್‍ಕೀಪರ್ ಡಿಕ್‍ವೆಲಾ(33ರನ್, 3 ಬೌಂಡರಿ, 1 ಸಿಕ್ಸರ್), ನಿಶಾಂಕ 839 ರನ್, 4 ಬೌಂಡರಿ, 1 ಸಿಕ್ಸರ್) ಸಿಡಿಸಿದರೆ, ವಿಂಡೀಸ್ ಪರ ಮೆಕ್‍ಕೋನ್ 2 ವಿಕೆಟ್ ಕಬಳಿಸಿದರೆ, ಉಳಿದ ಬೌಲರ್‍ಗಳು ತಲಾ 1 ವಿಕೆಟ್ ಕೆಡವಿದರು. ಈ ಗುರಿಯನ್ನು ಬೆನ್ನಟ್ಟಿದ ವೆಸ್ಟ್‍ಇಂಡೀಸ್ 13.1 ಓವರ್‍ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.

ವಿಂಡೀಸ್ ಪರ ಪೋಲಾರ್ಡ್ (38 ರನ್, 11 ಎಸೆತ, 6 ಸಿಕ್ಸ್), ಜೆಸನ್ ಹೋಲ್ಡರ್(29 ರನ್, 1 ಬೌಂಡರಿ, 2 ಸಿಕ್ಸರ್) ರನ್ ಗಳಿಸಿದರೆ, ಶ್ರೀಲಂಕಾ ಪರ ಅಕಿಲಾ ಧನಂಜಯ ಹಾಗೂ ಡಿಸಿಲ್ವಾ ತಲಾ 3 ವಿಕೆಟ್ ಕೆಡವಿದರು.

# ಅಕಿಲಾ ಧನಂಜಯ ಹ್ಯಾಟ್ರಿಕ್
ವೆಸ್ಟ್‍ಇಂಡೀಸ್ ವಿರುದ್ಧ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಶ್ರೀಲಂಕಾದ ಅಕಿಲಾ ಧನಂಜಯ ಒಂದೇ ಓವರ್‍ನಲ್ಲಿ 36 ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಅಪಕೀರ್ತಿಗೆ ಪಾತ್ರರಾದರೂ ಕೂಡ ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಅಕಿಲಾ ಧನಂಜಯ ಅವರು ತಾವು ಮಾಡಿದ ಎರಡನೇ ಓವರ್‍ನ 3.2, 3.3, 3.4 ಓವರ್‍ಗಳಲ್ಲಿ ಕ್ರಮವಾಗಿ ಸೋಟಕ ಆಟಗಾರರಾದ ಲಿವಿಸ್, ಕ್ರಿಸ್‍ಗೇಲ್ ಹಾಗೂ ನಿಕೋಲಸ್ ಪೂರನ್ ವಿಕೆಟ್‍ಗಳನ್ನು ಕೆಡವಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು, ತಾವು ಮಾಡಿದ 3ನೇ ಓವರ್‍ನಲ್ಲಿ ಪೋಲಾರ್ಡ್‍ಗೆ 36 ರನ್‍ಗಳನ್ನು ಬಿಟ್ಟುಕೊಟ್ಟು ನಿರಾಸೆ ಅನುಭವಿಸಿದರು.

Facebook Comments

Sri Raghav

Admin