ಜಮ್ಮು- ಕಾಶ್ಮೀರದಲ್ಲಿ ಉಗ್ರರಿಂದ ಟ್ರಕ್ ಚಾಲಕ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಅ.15- ಕಣಿವೆ ಪ್ರಾಂತ್ಯ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದೆ. ಶೋಪಿಯನ್ ಜಿಲ್ಲೇಯಲ್ಲಿ ಸೇಬುಗಳನ್ನು ಸಾಗಿಸಲಾಗುತ್ತಿದ್ದ ಟ್ರಕ್ ಚಾಲಕನನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಉಗ್ರರು ಪಾಕಿಸ್ತಾನದವರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತನನ್ನು ಶರೀಫ್ ಖಾನ್ ಎಂದು ಗುರುತಿಸಲಾಗಿದೆ. ಶಿರ್ಮಾಲ್ ಹಳ್ಳಿಯಲ್ಲಿ ಉಗ್ರರು ಈ ದಾಳಿ ನಡೆಸಿದ್ದಾರೆ. ಸಂವಿಧಾನದ 370ನೇ ವಿಧಿ ರದ್ಧತಿ ನಂತರ 72 ದಿನಗಳ ಕಾಲ ಸಂವಹನ ಜಾಲ ಸ್ಥಗಿತಗೊಂಡಿದ್ದ ಕಾಶ್ಮೀರದಲ್ಲಿ ಪೋಸ್ಟ್ ಪೇಯ್ಡ ಮೊಬೈಲ್ ಪೋನ್‍ಗಳ ಸೇವೆಯನ್ನು ಪುನರ್ ಆರಂಭಿಸಿದ ನಂತರ ಈ ಘಟನೆ ನಡೆದಿದೆ.

ಶರೀಫ್ ಖಾನ್‍ನನ್ನು ಹತ್ಯೆಗೈದಿದ್ದರೆ ಸೇಬು ತೋಟದ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ರಾಜಸ್ತಾನ ನೋಂದಣಿಯ ಟ್ರಕ್‍ಗೆ ಜಮ್ಮುವಿನಲ್ಲಿ ಬೆಂಕಿ ಹಚ್ಚಲಾಗಿದೆ.  ಮೃತದೇಹವನ್ನು ಟ್ರಕ್‍ನಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments