ನಡತೆಯ ಬಗ್ಗೆ ಅನುಮಾನ : ಹೆತ್ತ ಮಗಳನ್ನೇ ಹತ್ಯೆ ಹತ್ಯೆ ಮಾಡಿದ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.14- ಮಗಳ ನಡತೆಯ ಬಗ್ಗೆ ಸಂಶಯಪಟ್ಟ ತಂದೆ 12 ವರ್ಷದ ಮಗಳನ್ನು ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಯೂರು ಬಳಿಯ ಸಮುದ್ರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರಾಜಣ್ಣ ಎಂಬುವನು ತನ್ನ ಮಗಳಾದ ಚಂದ್ರಿಕಾಳನ್ನು ಕೊಲೆ ಮಾಡಿದ್ದಾನೆ. ಪತ್ನಿಯ ಜತೆ ಜಗಳವಾಡಿಕೊಂಡು ಕಳೆದ 11 ವರ್ಷಗಳ ಹಿಂದೆ ಪತ್ನಿಯನ್ನು ಬಾವಿಗೆ ತಳ್ಳಿ ಸಾಯಿಸಿದ್ದ ಎನ್ನಲಾಗಿದೆ. ಈಗ ಮಗಳನ್ನು ಕೊಲೆ ಮಾಡಿದ್ದಾನೆ.

ಪದೇ ಪದೇ ಕುಡಿದು ಜಗಳ ಮಾಡುತ್ತಿದ್ದ ರಾಜಣ್ಣ ಮಕ್ಕಳನ್ನು ಮನ ಬಂದಂತೆ ಹೊಡೆಯುತ್ತಿದ್ದ. ಅಪ್ಪನ ಕೃತ್ಯಕ್ಕೆ ಬೇಸತ್ತು ರಾಮನಗರದ ಲಕ್ಷ್ಮೀಪುರದಲ್ಲಿ ಅಜ್ಜಿಯ ಮನೆಯಲ್ಲಿ ಚಂದ್ರಿಕಾ ವಾಸವಾಗಿದ್ದಳು. ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದ ಚಂದ್ರಿಕಾಳ ತಂದೆ ಅನವಶ್ಯಕವಾಗಿ ಅನುಮಾನ ಪಟ್ಟು ಮಗಳನ್ನೇ ಸಾಯಿಸಿದ್ದಾನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಲಕ್ಷ್ಮಯ್ಯ , ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ರಾಮಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ರಾಜಣ್ಣನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

Facebook Comments