ಕೌಟುಂಬಿಕ ಕಲಹ: ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಫೆ.15- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ವಿಜಯನಗರದಲ್ಲಿ ನಡೆದಿದೆ.ಕವಿತಾ ಪೀಸೆ (30) ಕೊಲೆಗೀಡಾಗಿರುವ ಗೃಹಿಣಿ. ಪತಿ ಪರಶುರಾಮ ಕತ್ತು ಹಿಸುಕಿ ಕೊಲೆಗೈದಿರುವ ಆರೋಪಿ.  ವಿಜಯನಗರದ ಅಪಾರ್ಟ್‍ಮೆಂಟ್‍ವೊಂದರಲ್ಲಿ ಈ ಘಟನೆ ನಡೆದಿದ್ದು, ಕಳೆದ ಎಂಟು ವರ್ಷಗಳ ಹಿಂದೆ ಪರಶುರಾಮ ಕವಿತಾ ಪೀಸೆಯನ್ನು ವಿವಾಹವಾಗಿದ್ದ.

ಈ ದಂಪತಿಗೆ ಏಳು ವರ್ಷದ ಹಾಗೂ ಆರು ತಿಂಗಳ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  ಕಳೆದ ಸೋಮವಾರ ಕಿರಿಯ ಪುತ್ರಿಯ ಜವಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಇಬ್ಬರ ನಡುವೆ ಉಂಟಾದ ಕೌಟುಂಬಿಕ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.  ಪರಶುರಾಮ ಖಾಸಗಿ ಬ್ಯಾಂಕ್‍ನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾನೆ. ಘಟನೆ ಬಳಿಕ ಆರೋಪಿ ಪರಶುರಾಮನನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Facebook Comments