ಬೇರೆಯವನೊಂದಿಗೆ ಸಂಬಂಧ ಶಂಕೆ, ಕಲ್ಲಿನಿಂದ ರೂಪದರ್ಶಿ ಮುಖ ಜಜ್ಜಿ ಕೊಂದ ಪ್ರಿಯತಮ..!

ಈ ಸುದ್ದಿಯನ್ನು ಶೇರ್ ಮಾಡಿ

ನಾಗಪುರ,ಜು.16- ಅನೈತಿಕ ಸಂಬಂಧದ ಶಂಕೆಯ ಮೇರೆಗೆ ಪ್ರಿಯಕರನೊಬ್ಬ ರೂಪದರ್ಶಿಯಾಗಿದ್ದ ತನ್ನ ಪ್ರಿಯತಮೆಯನ್ನು ಭೀರಕವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಪ್ರಿಯಕರನೊಬ್ಬ ತನ್ನ ಪ್ರಿಯತಮೆ ಜೊತೆ ಮದುವೆಯಾಗಿ ಬಾಳು ಕಟ್ಟಿಕೊಳ್ಳಬೇಕೆಂಬ ಕನಸಿನಲ್ಲಿದ್ದ.

ಆದರೆ ತನ್ನ ಪ್ರೇಯಸಿ ಇನ್ನೊಬ್ಬನೊಂದಿಗೆ ಚಕ್ಕಂದವಾಡುತ್ತಿದ್ದಾಳೆನೋ ಎಂಬ ಅನುಮಾನದ ಮೇಲೆ ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ನಾಗಪುರದ ನಿವಾಸಿ ಅಶ್ರಫ್ ಶೇಕ್ ಮಾಡೆಲ್ ಖುಷಿ ಪರಿಹಾರ್‍ಳನ್ನು ಪ್ರೀತಿಸುತ್ತಿದ್ದ. ಇನ್ನೇನು ಮದುವೆಯಾಗಬೇಕು ಎಂದುಕೊಂಡಿದ್ದ ಅಶ್ರಫ್‍ಗೆ ಖುಷಿ ಮೇಲೆ ಅನುಮಾನ ಬಂದಿದೆ. ಆಕೆಯ ವರ್ತನೆ ಬದಲಾಗಿದ್ದಕ್ಕೆ ಮೊದಲಿಗೆ ಅಶ್ರಫ್ ಆಕ್ಷೇಪಿಸುತ್ತಾ ಬಂದಿದ್ದ ಇದರಿಂದ ಇಬ್ಬರ ನಡುವೆ ಸದಾ ಜಗಳವಾಗುತ್ತಿತ್ತು.

ಮೊನ್ನೆ ಮತ್ತೆ ಜಗಳದ ನಂತರ ಇಬ್ಬರು ಸುಮ್ಮನಾಗಿದ್ದಾರೆ. ಬಳಿಕ ಕಾರಿನಲ್ಲಿ ಇಬ್ಬರು ತೆರಳಿದ್ದಾರೆ. ಪಂಡುರ್ನಾ-ನಾಗಪುರ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಸಾವ್ಲಿ ಫತಾ ಎಂಬ ನಿರ್ಜನ ಪ್ರದೇಶದಲ್ಲಿ ಅಶ್ರಫ್ ಕಾರು ನಿಲ್ಲಿಸಿದ್ದಾನೆ.

ಬಳಿಕ ಆಕೆಯ ಜೊತೆ ಮತ್ತೆ ಜಗಳವಾಡಿ ಆಕೆಯನ್ನು ಕೆಳಕ್ಕೆ ಕೆಡವಿ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆ ಮಾಡಿ ಬಂದಿದ್ದಾನೆ. ನಂತರ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಮೃತ ಮಹಿಳೆ ಖುಷಿ ಮಾಡೆಲ ಎಂದು ತಿಳಿದುಬಂದಿದೆ.

ಇದೇ ವಿಚಾರವಾಗಿ ಅಶ್ರಫ್‍ನನ್ನು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments