ಎಗ್ ಕರಿ ಮಾಡದ ಸ್ನೇಹಿತನ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.19- ಎಗ್ ಕರಿ(ಮೊಟ್ಟೆ ರೋಸ್ಟ್) ಮಾಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ನಾಗಪುರ ಜಿಲ್ಲೆಯ ಮಂಕಾಪುರ ಪ್ರದೇಶದಲ್ಲಿ ನಡೆದಿದೆ. ಬನಾರಸಿ(40) ಕೊಲೆಯಾಗಿರುವ ಸ್ನೇಹಿತ.  ರಾತ್ರಿ ಊಟಕ್ಕೆ ರೂಮ್‍ಗೆ ಬರುವಂತೆ ಸ್ನೇಹಿತ ಗೌರವ್ ಗಾಯಕ್‍ವಾಡ್(38)ನನ್ನು ಕರೆಸಿಕೊಂಡಿದ್ದಾನೆ.

ಇಬ್ಬರು ಕಂಠಪೂರ್ತಿ ಕುಡಿದ ನಂತರ ಗಾಯಕ್‍ವಾಡ್ ಮೊಟ್ಟೆ ಕರಿ ಮಾಡಿಕೊಡುವಂತೆ ಕೋರಿದ್ದಾನೆ. ಮೊಟ್ಟೆಯ ಮೇಲೋಗರವನ್ನು ತಯಾರಿಸದ ಕಾರಣಕ್ಕಾಗಿ ಕೋಪಗೊಂಡು ಕೊಲೆ ಮಾಡಿದ್ದಾನೆ.  ತಡರಾತ್ರಿಯವರೆಗೆ ಕುಡಿದ ನಂತರ, ಅವರು ಮೊಟ್ಟೆ ಕರಿ ಮಾಡಿಲ್ಲವೆಂದು ಜಗಳ ಮಾಡಿದ್ದಾನೆ.

ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ಗೈಕ್ವಾಡ್ ಬನಾರಸಿಯ ಮೇಲೆ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಬನಾರಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಕಪುರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments