ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಯ್ತು ಕಿರಿಕ್ ಕಿಮ್ ಮಾಡಿದ ‘ದಯಾಮಯಿ’ ಟ್ವೀಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 24- ನೀವು ಹೇಗಿರಲಿ ದಯೆ ನಿಮ್ಮನ್ನು ವಿಶ್ವದ ಅತ್ಯಂತ ಸುಂದರ ವ್ಯಕ್ತಿಯನ್ನಾಗಿ ಮಾಡುತ್ತದೆ. ಯಾವಾಗಲೂ ದಯೆಯಿಂದಿರಿ. ಹಿಗೇಂದು ಟ್ವಿಟ್ ಮಾಡುವ ಮೂಲಕ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್ ಟ್ವಿಟ್ ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಉತ್ತರ ಕೊರಿಯಾದ ಸರ್ವಾಕಾರಿ, ಜಗತ್ತನ್ನೆ ಆತಂಕಕ್ಕೆ ದೂಡಿದ ಹುಚ್ಚು ದೊರೆಯಲ್ಲಿ ದಯೆಯ ಮಾತುಗಳೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

ಕಿಮ್ ಅಷ್ಟಕ್ಕೆ ನಿಂತಿಲ್ಲ. ಭಾರತದ ಬಡ ಮಹಿಳೆ ಮಗು ಎತ್ತಿಕೊಂಡಿರುವುದು, ಆ ಮಗು ಮುಖದಲ್ಲಿ ಅಪರಿಮಿತವಾದ ಆನಂದ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರ ಕೆಳಗೆ ಮಕ್ಕಳಿಗೆ ಸಂಪತ್ತು ಮತ್ತು ಬಡತನ ಅರ್ಥವಾಗುವುದಿಲ್ಲ.

ಮಕ್ಕಳಿಗೆ ಜೀವನದ ಸೌಕರ್ಯಗಳು ಮತ್ತು ಹೋರಾಟಗಳು ಅರ್ಥವಾಗುವುದಿಲ್ಲ. ಮಕ್ಕಳು ತಮ್ಮ ತಾಯಿಯ ತೋಳುಗಳಲ್ಲಿ ಸುರಕ್ಷಿತ ಮತ್ತು ಸಂತೋಷದಾಯಕ ಎಂದು ಅರ್ಥಮಾಡಿಕೊಳ್ಳುತ್ತವೆ ಎಂದು ಬರೆದಿದ್ದಾರೆ.

ಕಿಮ್ ಯುಗ ಮುಗಿದೆ ಹೋಯಿತು ಎಂದು ಹೇಳುತ್ತಿದ್ದ ಕಾಲದಲ್ಲಿ ಮತ್ತೆ ಎದ್ದು ಬಂದಿರುವ ಸರ್ವಾಕಾರಿಯ ಟ್ವಿಟ್ ಗಳು ದಯೆ, ಕರುಣೆ, ಮಮತೆಯ ಸಂದೇಶ ಸಾರುತ್ತಿರುವುದು ನಿಗೂಢತೆಯನ್ನು ಹುಟ್ಟು ಹಾಕಿದೆ.

Facebook Comments

Sri Raghav

Admin